ಆ್ಯಂಡ್ರೂ ಸೈಮಂಡ್ಸ್ ನಿವೃತ್ತಿ

7

ಆ್ಯಂಡ್ರೂ ಸೈಮಂಡ್ಸ್ ನಿವೃತ್ತಿ

Published:
Updated:

ಮೆಲ್ಬರ್ನ್ (ಪಿಟಿಐ):  ಆಸ್ಟ್ರೇಲಿಯಾದ ಆಲ್‌ರೌಂಡರ್ ಆ್ಯಂಡ್ರೂ ಸೈಮಂಡ್ಸ್ ಗುರುವಾರ ಎಲ್ಲ ವಿಧದ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ.`ನಾನು ಎಲ್ಲಾ ವಿಧದ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದೆ. ಇದರಿಂದಲೂ ದೂರ ಉಳಿಯುತ್ತೇನೆ~ ಎಂದು ಅವರು ಖಚಿತ ಪಡಿಸಿದ್ದಾರೆ.ಭಾರತ ಕ್ರಿಕೆಟ್ ತಂಡ 2008ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಹರಭಜನ್ ಸಿಂಗ್ ಹಾಗೂ ಸೈಮಂಡ್ಸ್ ನಡುವೆ ಜನಾಂಗೀಯ ನಿಂದನೆ ಪ್ರಕರಣ ನಡೆದಿತ್ತು. ಈ ವೇಳೆ ಆಸೀಸ್‌ನ ಆಟಗಾರ ಭಾರಿ ಸುದ್ದಿಗೆ ಒಳಗಾಗಿದ್ದರು.1998ರಲ್ಲಿ ಲಾಹೋರ್‌ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಸೈಮಂಡ್ಸ್ ಪದಾರ್ಪಣೆ ಮಾಡಿದ್ದರು. 2009ರಲ್ಲಿ ಅಬುದಾಬಿಯಲ್ಲಿ ಪಾಕ್ ವಿರುದ್ಧ ಆಡಿದ ಪಂದ್ಯವೇ ಕೊನೆಯದಾಗಿತ್ತು.

 2004ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದರು.26 ಟೆಸ್ಟ್ ಆಡಿರುವ ಈ ಆಟಗಾರ ಒಟ್ಟು 1462 ರನ್ ಗಳಿಸಿದ್ದಾರೆ. ಅದರಲ್ಲಿ ಎರಡು ಶತಕ ಹಾಗೂ ಹತ್ತು ಅರ್ಧಶತಕಗಳು ಸೇರಿವೆ. ಕಳೆದ ಮೂರು ವರ್ಷದಿಂದ ಟ್ವೆಂಟಿ-20 ಪಂದ್ಯದಲ್ಲೂ ಆಡಿರಲಿಲ್ಲ.

198 ಏಕದಿನ ಪಂದ್ಯಗಳನ್ನು ಆಡಿ ಒಟ್ಟು 5088 ರನ್ ಗಳಿಸಿ 133 ವಿಕೆಟ್ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry