ಶನಿವಾರ, ಏಪ್ರಿಲ್ 17, 2021
28 °C

ಆ್ಯಪಲ್ ಪೇರಳೆ

ಸಹನಾ ಕಾಂತಬೈಲು Updated:

ಅಕ್ಷರ ಗಾತ್ರ : | |

ನಮ್ಮಲ್ಲಿ ಹತ್ತಾರು ಪೇರಳೆ ತಳಿಗಳಿವೆ. ಅವುಗಳಲ್ಲಿ ಆ್ಯಪಲ್ ಪೇರಳೆಯೂ ಒಂದು. ಇದು ವಿಶಿಷ್ಟ ತಳಿ. ವರ್ಷವಿಡೀ ಫಲ ಕೊಡುತ್ತದೆ. ಇದರ ರುಚಿಯೂ ವಿಶಿಷ್ಟ.ಇದು ನೋಡಲು ಸಣ್ಣ ಗಾತ್ರದ ಸೇಬು (ಮಿಸಿರಿ ಆ್ಯಪಲ್) ಹಣ್ಣಿನಂತೆ ಕಾಣುತ್ತದೆ. ಹೀಗಾಗಿ ಇದಕ್ಕೆ ಈ ಹೆಸರು. ಬಲಿತ ಹಣ್ಣಿನ ಬಣ್ಣ ಹಳದಿ. ಕತ್ತರಿಸಿ ನೋಡಿದರೆ ಒಳಗೆ ಕೆಂಪು ಬಣ್ಣದ ತಿರುಳು. ಕೆಲವೇ ಕೆಲವು ಸಣ್ಣ ಸಣ್ಣ ಬೀಜಗಳು. ಹಣ್ಣುಗಳು ತೀರಾ ಮೃದು. ಸಕ್ಕರೆಯಷ್ಟೇ ಸಿಹಿ.ಈ ಪೇರಳೆ ಆರೋಗ್ಯಕ್ಕೆ ಒಳ್ಳೆಯದು. ಗಿಡ ಹೆಚ್ಚು ಎತ್ತರ ಬೆಳೆಯದ ಕಾರಣ ಮನೆಯ ಅಂಗಳದಲ್ಲಿ ನೆಡಬಹುದು. ತೋಟದ ಅಂಚಿನಲ್ಲಿ ಉಪ ಬೆಳೆಯಾಗಿ ಬೆಳೆಯಬಹುದು. ಗಿಡಗಳನ್ನು ಕಸಿ ಕಟ್ಟಿ ಬೆಳೆಸಿಕೊಳ್ಳಬಹುದು. ನಾಟಿ ಮಾಡಿದ ಎರಡು ವರ್ಷಗಳಲ್ಲಿ ಫಲ ಕೊಡುತ್ತವೆ.ಈ ಅಪರೂಪದ ತಳಿಯನ್ನು ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕೃಷ್ಣಮೂರ್ತಿ ಅವರ ಮನೆಯ ಅಂಗಳದಲ್ಲಿ ಕಾಣಬಹುದು. ಅವರು ಮೂರು ವರ್ಷದ ಹಿಂದೆ ಕೇರಳದ ನರ್ಸರಿಯೊಂದರಿಂದ ಎರಡು ಸಸಿ ತಂದು ನೆಟ್ಟಿದ್ದರು. ಅವೀಗ ಉತ್ತಮ ಫಲ ಬಿಡುತ್ತಿವೆ. ಮನೆಗೆ ಬಂದ ನೆಂಟರಿಷ್ಟರು  ಹಣ್ಣು ತಿಂದು ಅದರ ರುಚಿಯನ್ನು ಹೊಗಳುತ್ತಾರೆ ಎಂದು ಹೇಳುತ್ತಾರೆ ಕೃಷ್ಣಮೂರ್ತಿ.ಆ್ಯಪಲ್ ಪೇರಳೆಯ ಕೃಷಿ ಸುಲಭ. ಕೀಟಬಾಧೆ ಇಲ್ಲ. ಮಾರುಕಟ್ಟೆಯಲ್ಲಿ ಬೆಲೆ ಮತ್ತು ಬೇಡಿಕೆ ಇದೆ. ಕಡಿಮೆ ಆರೈಕೆ ಮಾಡಿದರೆ ಸಾಕು. ಹೀಗಾಗಿ ರೈತರಿಗೆ ಇದು ಉತ್ತಮ ವರಮಾನ ತರುವ ಬೆಳೆ ಆಗಬಲ್ಲದು ಎನ್ನುತ್ತಾರೆ ಅವರು. ಮಾಹಿತಿಗೆ: 97437 89841. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.