ಭಾನುವಾರ, ಡಿಸೆಂಬರ್ 8, 2019
25 °C
ಲಾಗಿನ್

ಆ್ಯಪ್ ಡೆವಲಪರ್‌ಗಳಿಗೆ ಪೋರ್ಟಲ್

Published:
Updated:
ಆ್ಯಪ್ ಡೆವಲಪರ್‌ಗಳಿಗೆ ಪೋರ್ಟಲ್

ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ, ಅಮೆರಿಕ ಮೂಲದ ಮೈಕ್ರೊಸಾಫ್ಟ್ ಕಂಪೆನಿ ಇದೀಗ ತನ್ನ ಜಾಲದಲ್ಲಿ ಕಾರ್ಯನಿರ್ವಹಿಸುವ ಭಾರತದ ತಂತ್ರಾಂಶ ಅಭಿವೃದ್ಧಿ ದಾರರಿಗಾಗಿ (ಸಾಫ್ಟ್‌ವೇರ್ ಡೆವಲಪರ್ಸ್) ಸಮುದಾಯ ಆಧಾರಿತ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಒಂದು `ಪೋರ್ಟಲ್' ಸಿದ್ಧಪಡಿಸಿದೆ.ಆ್ಯಪ್‌ಗಳನ್ನು (ಅಪ್ಲಿಕೇಷನ್) ಸಿದ್ಧಪಡಿಸುವ ಕ್ರಿಯೆಯಲ್ಲಿ ಡೆವಲಪರ್‌ಗಳು ಪರಿಣಾಮಕಾರಿಯಾಗಿ ತೊಡಗಿಸಿ ಕೊಳ್ಳಲು ಅನುವಾಗುವ ನಿಟ್ಟಿನಲ್ಲಿ ಕಂಪೆನಿಯು ಅವರ  ಸಮಸ್ಯೆಗಳ ಪರಿಹಾರಕ್ಕಾಗಿ ಈ ಸಹಕಾರಿ ತಾಣದಲ್ಲಿ  ತಜ್ಞರ ಮಾರ್ಗದರ್ಶನವನ್ನು ಒದಗಿಸುವ ಅವಕಾಶವನ್ನೂ ಕಲ್ಪಿಸಿದೆ.ಅಮೆರಿಕದ ನಂತರ ಭಾರಿ  ಪ್ರಮಾಣದ ತಂತ್ರಾಂಶ ಅಭಿವೃದ್ಧಿ ದಾರರನ್ನು ಹೊಂದಿರುವ ಎರಡನೇ ದೇಶವಾದ ಭಾರತದಲ್ಲಿ ಸುಮಾರು ಸದ್ಯ 16 ಲಕ್ಷ ಡೆವಲಪರ್‌ಗಳಿದ್ದಾರೆ. ದೊಡ್ಡ ಪ್ರಮಾಣದ ಈ ಸಮೂಹಕ್ಕೆ ಗಣಕಶಕ್ತಿಯ ಪೂರ್ಣ ಪ್ರಯೋಜನವನ್ನು ಒದಗಿಸುವುದಕ್ಕಾಗಿ ಈ ತಾಣದ ಕಾರ್ಯನಿರ್ವಹಣೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.`ಒಂದು ಪ್ರಬಲ ಸಾಧನವಾಗಿ ಬಳಸಬಹುದಾದ ಈ ತಾಣವು (developer.microsoft.com) ಭಾರತದಲ್ಲಿರುವ ನಮ್ಮ ಆಪ್ ಡೆವಲಪರ್‌ಗಳು ವಿಶ್ವದಾದ್ಯಂತ ಇರುವ ತಮ್ಮ ಸಹವರ್ತಿಗಳೊಂದಿಗೆ ಸಂಪರ್ಕ ಬೆಳೆಸಲು ಸಹಾಯ ಒದಗಿಸುತ್ತದೆ. ಜತೆಗೆ ನಮ್ಮ ಪರಿಣಿತರು ಕೂಡ ಒಂದು ಕ್ಲಿಕ್‌ನಲ್ಲಿ ಅವರಿಗೆ ಲಭ್ಯವಾಗುತ್ತಾರೆ' ಎನ್ನುತ್ತಾರೆ ಮೈಕ್ರೊಸಾಫ್ಟ್ ಕಾರ್ಪೊರೇಷನ್(ಭಾರತ) ಲಿ.ನ  ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ಪ್ರತಿಮಾ ಅಮೊನ್‌ಕರ್.ಈ ತಾಣದ `ದೃಷ್ಟಿಕೋನ' (Perspective) ಎಂಬ ವಿಭಾಗದಲ್ಲಿ ಅಭಿವೃದ್ಧಿದಾರರು ತಮ್ಮ ಕಲ್ಪನೆಯ ಆ್ಯಪ್‌ಗಳ ಕುರಿತ ಮಾಹಿತಿಯನ್ನು ಒದಗಿಸಲು ಅನುವು ಮಾಡಿಕೊಡಲಾಗಿದೆ.`ಸಮುದಾಯ ಬ್ಲಾಗ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಡೆವಲಪರ್‌ಗಳು ತಮ್ಮ ಕಲ್ಪನೆಗಳ ಕುರಿತಾದ ಮಾಹಿತಿಗಳನ್ನು ಇಲ್ಲಿ ಹಂಚಿ ಕೊಳ್ಳುವುದರ ಜತೆಗೆ ವಿಶ್ವದಾದ್ಯಂತ ಇರುವ ಪರಿಣಿತರು ಹಾಗೂ ತಜ್ಞರಿಂದ ಸಲಹೆ, ಸೂಚನೆಗಳನ್ನೂ ಪಡೆಯಬಹುದಾಗಿದೆ' ಎನ್ನುತ್ತಾರೆ ಅಮೊನ್‌ಕರ್.ಎಲ್ಲ ಆ್ಯಪ್ ಡೆವಲಪರ್‌ಗಳೆಲ್ಲ ಸುಲಭವಾಗಿ ಪ್ರವೇಶಿಸಬಹುದಾದ ಈ ತಾಣದಲ್ಲಿ ವಿವಿಧ ಪ್ರದೇಶಗಳ ಕುರಿತಾದ ಅಮೂಲ್ಯ ಮಾಹಿತಿಯೂ ಲಭ್ಯವಾಗುತ್ತದೆ. `ಡೆವಲಪರ್‌ಗಳ ಈ ಜಾಲತಾಣವು ಕಂಪೆನಿ ಮತ್ತು ಪರಸ್ಪರರ ಮಧ್ಯದ ಸಂವಹನಕ್ಕೆ ಪೂರಕವಾದ ಅವಕಾಶವನ್ನು ಸಮುದಾಯಕ್ಕೆ ಒದಗಿಸಲಿದೆ' ಎನ್ನುತ್ತಾರೆ ಅಮೊನ್‌ಕರ್.  ಮೈಕ್ರೊಸಾಫ್ಟ್ ಕಂಪೆನಿ ಮಾತ್ರ ತನ್ನ ಡೆವಲಪರ್‌ಗಳಿಗೆ ತಮ್ಮ ಕೌಶಲಗಳ ಪ್ರಯೋಜನವನ್ನು ಪಡೆದುಕೊಳ್ಳಲು ಮತ್ತು ಕೋಡ್ ಮರುಬಳಕೆ ಮಾಡಿಕೊಂಡು ಆ್ಯಪ್‌ಗಳನ್ನು ಸಿದ್ಧಪಡಿಸಲೂ ಅವಕಾಶ ಒದಗಿಸಿದೆ.ಕಂಪೆನಿಯ ಪ್ರಮುಖ ಉತ್ಪನ್ನವಾದ ವಿಂಡೊಸ್ ಸಹ ಆಪ್ ಅಭಿವೃದ್ಧಿಪಡಿಸುವವರಿಗೆ ಉತ್ತಮ ಅವಕಾಶಗಳನ್ನು ಒದಗಿಸುವ ವೇದಿಕೆಯಾಗಿದೆ. ಅಲ್ಲದೆ, ಇದು ಪರಿಸರ ವ್ಯವಸ್ಥೆಗೆ ರೂಪಕೊಡುವುದರ ಜತೆಗೇ ಡೆವಲಪರ್‌ಗಳ ಆದಾಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎನ್ನುತ್ತದೆ ಕಂಪೆನಿ.

ಪ್ರತಿಕ್ರಿಯಿಸಿ (+)