ಆ್ಯಷಸ್‌ ಸರಣಿ: ಪನೇಸರ್‌ಗೆ ಸ್ಥಾನ

7

ಆ್ಯಷಸ್‌ ಸರಣಿ: ಪನೇಸರ್‌ಗೆ ಸ್ಥಾನ

Published:
Updated:

ಲಂಡನ್‌ (ಪಿಟಿಐ): ಆಸ್ಟ್ರೇಲಿಯಾ ದಲ್ಲಿ ನಡೆಯಲಿರುವ ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಗೆ ಇಂಗ್ಲೆಂಡ್‌ ತಂಡದಲ್ಲಿ ಎಡಗೈ ಸ್ಪಿನ್ನರ್‌ ಮಾಂಟಿ ಪನೇಸರ್‌ ಸ್ಥಾನ ಪಡೆದಿದ್ದಾರೆ.ಈ ಸರಣಿ ನವೆಂಬರ್‌ 21ರಿಂದ ಫೆಬ್ರುವರಿ 2ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಐದು ಟೆಸ್ಟ್‌, ಐದು ಏಕದಿನ ಹಾಗೂ ಮೂರು ಟ್ವೆಂಟಿ-20  ಪಂದ್ಯಗಳ ಸರಣಿ ನಡೆಯಲಿದೆ.ಪನೇಸರ್‌ ಇತ್ತೀಚೆಗೆ ಹಲವು ವಿವಾದ­ಗಳಿಗೆ ಕಾರಣವಾಗಿದ್ದಾರೆ. ಪಬ್‌ವೊಂದರಲ್ಲಿ ಮೂತ್ರ ವಿಸರ್ಜಿ­ಸಿದ್ದು ಆ ವಿವಾದಗಳಲ್ಲಿ ಒಂದು.ತವರಿನಲ್ಲಿ ನಡೆದ ಆ್ಯಷಸ್‌ ಸರಣಿಯನ್ನು ಅಲಸ್ಟೇರ್‌ ಕುಕ್‌ ಸಾರಥ್ಯದ ಇಂಗ್ಲೆಂಡ್‌ 3-0ರಲ್ಲಿ ಗೆದ್ದುಕೊಂಡಿತ್ತು.ಇಂಗ್ಲೆಂಡ್‌ ತಂಡ ಇಂತಿದೆ: ಅಲಸ್ಟೇರ್‌ ಕುಕ್‌, ಜೋ ರೂಟ್‌, ಜೊನಾಥನ್‌ ಟ್ರಾಟ್‌, ಕೆವಿನ್‌ ಪೀಟರ್ಸನ್‌, ಇಯಾನ್‌ ಬೆಲ್‌, ಜಾನಿ ಬೆಸ್ಟೋವ್‌, ಮಟ್‌ ಪ್ರಯೋರ್‌, ಸ್ಟುವರ್ಟ್‌ ಬ್ರಾಡ್‌, ಗ್ರೇಮ್‌ ಸ್ವಾನ್‌, ಜೇಮ್ಸ್‌ ಆ್ಯಂಡರ್ಸನ್‌, ಸ್ಟೀವನ್‌ ಫಿನ್‌, ಬಾಯ್ಡ್‌ ರಂಕಿನ್‌, ಬೆನ್‌ ಸ್ಟೋಕ್ಸ್‌, ಮಾಂಟಿ ಪನೇಸರ್‌, ಮೈಕಲ್‌ ಕಾರ್ಬೆರಿ, ಗ್ಯಾರಿ ಬ್ಯಾಲೆನ್ಸ್‌, ಕ್ರಿಸ್‌ ಟ್ರೆಮ್ಲೆಟ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry