ಆ್ಯಷಸ್ ವಿಜಯಕ್ಕೆ ಹೋಲಿಸಬಹುದು: ಕುಕ್

7

ಆ್ಯಷಸ್ ವಿಜಯಕ್ಕೆ ಹೋಲಿಸಬಹುದು: ಕುಕ್

Published:
Updated:

ನಾಗಪುರ: ಭಾರತ ವಿರುದ್ಧದ ಈ ಟೆಸ್ಟ್ ಸರಣಿ ವಿಜಯವನ್ನು ಇಂಗ್ಲೆಂಡ್ ತಂಡದ ನಾಯಕ ಅಲಸ್ಟೇರ್ ಕುಕ್ ಅವರು ಆಸ್ಟ್ರೇಲಿಯಾದಲ್ಲಿ ಆ್ಯಷಸ್ ಸರಣಿ ಗೆದ್ದ ಕ್ಷಣಕ್ಕೆ ಹೋಲಿಸಿದ್ದಾರೆ.`ಇದೊಂದು ಅವಿಸ್ಮರಣೀಯ ಪ್ರವಾಸ. ಈ ಪಂದ್ಯ ಸೇರಿದಂತೆ ಇಡೀ ಸರಣಿಯಲ್ಲಿ ನಮ್ಮ ಪ್ರದರ್ಶನ ಅಮೋಘವಾಗಿತ್ತು. ಹಾಗಾಗಿ ನಾನು ಈ ಪ್ರದರ್ಶನವನ್ನು ಆ್ಯಷಸ್ ಸರಣಿಗೆ ಹೋಲಿಸುತ್ತಿದ್ದೇನೆ. ಇಂಗ್ಲೆಂಡ್‌ನ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಹೇಳಬೇಕೆಂದರೆ ಆಸ್ಟ್ರೇಲಿಯಾದಲ್ಲಿ ಸಿಗುವ ಪ್ರತಿ ಗೆಲುವು ಅಮೂಲ್ಯ. ಆದರೆ ಭಾರತದಲ್ಲಿ ಲಭಿಸಿದ ಈ ಗೆಲುವೂ ನಮಗೆ ಅಷ್ಟೇ ಖುಷಿ ನೀಡಿದೆ' ಎಂದು ಕುಕ್ ನುಡಿದಿದ್ದಾರೆ.`ಒಂದನೇ ಕ್ರಮಾಂಕದಿಂದ ಹಿಡಿದು ಕೊನೆಯ ಕ್ರಮಾಂಕದವರೆಗಿನ ಆಟಗಾರರು ಪೂರ್ಣ ಸಾಮರ್ಥ್ಯದ ಪ್ರದರ್ಶನ ತೋರಿದ್ದಾರೆ. ಅವರ ಈ ಸಾಧನೆಗೆ ನಾನೆಷ್ಟು ಮೆಚ್ಚುಗೆ ವ್ಯಕ್ತಪಡಿಸಿದರೂ ಸಾಲದು. ಅದರಲ್ಲೂ ವೇಗಿ ಆ್ಯಂಡರ್ಸನ್, ಸ್ಪಿನ್ನರ್‌ಗಳಾದ ಮಾಂಟಿ ಪನೇಸರ್ ಹಾಗೂ ಗ್ರೇಮ್ ಸ್ವಾನ್ ಸಾಧನೆ ಅದ್ಭುತ' ಎಂದರು.ಚರ್ಮ ದಪ್ಪವಾಗಿರಬೇಕು: `ಭಾರತದ ಕ್ರಿಕೆಟಿಗರಾಗಿದ್ದರೆ ನಿಮ್ಮ ಚರ್ಮ ದಪ್ಪವಾಗಿರಬೇಕು'

ಪತ್ರಿಕಾಗೋಷ್ಠಿ ಮುಗಿಸಿಕೊಂಡು ಡ್ರೆಸ್ಸಿಂಗ್ ಕೊಠಡಿಗೆ ತೆರಳುತ್ತಿದ್ದಾಗ ಎದುರಾದ ಕೆಲವೇ ಪತ್ರಕರ್ತರೊಂದಿಗೆ ಮಾತನಾಡಿದ ದೋನಿ, `ಭಾರತದ ಕ್ರಿಕೆಟಿಗರಾಗಿದ್ದರೆ ನಿಮ್ಮ ಚರ್ಮ ಸ್ವಲ್ಪ ದಪ್ಪವಾಗಿರಬೇಕುತ್ತದೆ. ಆಗ ಮಾತ್ರ ಟೀಕಾ ಪ್ರಹಾರವನ್ನು ಸಹಿಸಿಕೊಳ್ಳಬಹುದು' ಎಂದು ಹೇಳಿದರು.ಸಚಿನ್ ವಿದಾಯದ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, `ನಮ್ಮಂದಿಗೆ ಖಂಡಿತ ಆ ವಿಷಯದ ಬಗ್ಗೆ ಸಚಿನ್ ಇದುವರೆಗೆ ಚರ್ಚಿಸಿಲ್ಲ. ಮುಂದಿನ ಸರಣಿಯಲ್ಲೂ ಅವರು ಆಡುತ್ತಾರೆ ಎಂಬ ವಿಶ್ವಾಸವಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry