ಆ್ಯಷಸ್ ಸರಣಿ 5-0ರಲ್ಲಿ ಗೆಲ್ಲುವ ಗುರಿ: ಜೇಮ್ಸ ಆ್ಯಂಡರ್‌ಸನ್

7

ಆ್ಯಷಸ್ ಸರಣಿ 5-0ರಲ್ಲಿ ಗೆಲ್ಲುವ ಗುರಿ: ಜೇಮ್ಸ ಆ್ಯಂಡರ್‌ಸನ್

Published:
Updated:
ಆ್ಯಷಸ್ ಸರಣಿ 5-0ರಲ್ಲಿ ಗೆಲ್ಲುವ ಗುರಿ:  ಜೇಮ್ಸ ಆ್ಯಂಡರ್‌ಸನ್

ಲಂಡನ್ (ಐಎಎನ್‌ಎಸ್): ಆ್ಯಷಸ್ ಸರಣಿಯನ್ನು 5-0ರಲ್ಲಿ ಗೆಲ್ಲುವುದು ಇಂಗ್ಲೆಂಡ್ ತಂಡದ ಗುರಿ ಎಂದು ವೇಗಿ ಜೇಮ್ಸ ಆ್ಯಂಡರ್‌ಸನ್ ಅಭಿಪ್ರಾಯ ಪಟ್ಟಿದ್ದಾರೆ.2006-07ರಲ್ಲಿ ಆಸ್ಟ್ರೇಲಿಯಾದಲ್ಲಿ ಆ್ಯಷಸ್ ಸರಣಿಯನ್ನು 5-0ರಲ್ಲಿ ಸೋತಿದ್ದ ಇಂಗ್ಲೆಂಡ್, ಇದೀಗ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಪ್ರಸಕ್ತ ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 2-0 ಮುನ್ನಡೆ ಸಾಧಿಸಿದೆ.ಪ್ರಸಕ್ತ ಆ್ಯಷಸ್ ಸರಣಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದಿರುವ ಆ್ಯಂಡರ್‌ಸನ್, ಗ್ರೇಮ್ ಸ್ವಾನ್ ಅವರೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.`ಕಠಿಣ ಪರಿಸ್ಥಿತಿ ಎದುರಾದರೂ ಸಮಾಧಾನದಿಂದ ಆಡುವಲ್ಲಿ ಯಶಸ್ವಿಯಾಗಿದ್ದೇವೆ. ಉತ್ತಮ ಬೌಲಿಂಗ್ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸಬೇಕಿದೆ. ಉಳಿದಿದ್ದು ನಮ್ಮ ಕೈಯಲ್ಲಿಲ್ಲ' ಎಂದೂ ಆ್ಯಂಡರ್‌ಸನ್ ಅಭಿಪ್ರಾಯ ಪಟ್ಟಿದ್ದಾರೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry