ಆ ಮರ್ಮಕ್ಕೆ ಯು/ಎ

7

ಆ ಮರ್ಮಕ್ಕೆ ಯು/ಎ

Published:
Updated:

ಮಧುಸೂದನ್ ನಿರ್ಮಿಸಿ ಸಂಗೀತ ನೀಡಿರುವ ‘ಆ ಮರ್ಮ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು/ಎ’ ಪ್ರಮಾಣಪತ್ರ ನೀಡಿದೆ. ಮದನ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಛಾಯಾಗ್ರಹಣ ಕಲ್ಯಾಣ ಸಮಿ,  ಸಾಹಸ: ಥ್ರಿಲ್ಲರ್ ಮಂಜು, ಕಲೆ: ರೇವಣ್ಣ, ನೃತ್ಯ: ತಾರಾಪ್ರಸಾದ್, ನಿರ್ವಹಣೆ: ಗಂಗಾಧರ್.ತಾರಾಗಣದಲ್ಲಿ ಸಾಯಿಕುಮಾರ್, ಜಾಕಿ ಶ್ರಾಫ್, ಥ್ರಿಲ್ಲರ್ ಮಂಜು, ರಾಮರೆಡ್ಡಿ, ದಂಡಪಾಣಿ, ಸತ್ಯಪ್ರಕಾಶ್, ಅಚ್ಯುತ್ ಕುಮಾರ್, ಪದ್ಮಜಾ ರಾವ್, ನಳಿನಿ ರಾಮ್  ಕಿರಣ್, ಅರ್ಚನಾ, ರಾಧಿಕಾ ರೈ, ಸುನೀಲ್, ಜಗದೀಶ್ ಮುಂತಾದವರು ಅಭಿನಯಿಸಿದ್ದಾರೆ.ಆಸ್ಪತ್ರೇಲಿ ‘ತೂಫಾನ್’: ಎಚ್. ಜಡೇಗೌಡ ನಿರ್ಮಿಸುತ್ತಿರುವ ‘ತೂಫಾನ್’ ಚಿತ್ರಕ್ಕೆ ನೆಲಮಂಗಲ ರಸ್ತೆಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಯಶಸ್, ನಕ್ಷತ್ರ, ಚಂದನ್ ಅಭಿನಯಿಸಿದ್ದ ದೃಶ್ಯಗಳನ್ನು ಸೆರೆಹಿಡಿಯಲಾಯಿತು. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಸ್ಮೈಲ್ ಸೀನು ಅವರದ್ದು. ಛಾಯಾಗ್ರಹಣ: ರವಿ ಸುವರ್ಣ, ಸಂಗೀತ: ಎಲ್ವಿನ್ ಜೋಶ್ವಾ, ಸಂಕಲನ: ಪಿ.ಆರ್. ಸೌಂದರರಾಜ್, ಕಲೆ: ರಮೇಶ್ ದೇಸಾಯಿ, ನೃತ್ಯ: ಹರ್ಷ.ತಾರಾಗಣದಲ್ಲಿ ಯಶಸ್, ನಕ್ಷತ್ರ, ಚಂದನ್, ರಮೇಶ್ ಭಟ್, ಶಿವರಾಮಣ್ಣ, ಮಂಗಳೂರು ಸುರೇಶ್, ದೇವದಾಸ್ ಕಾಪಿಕಾಡ್, ಪ್ರಮೀಳಾ ಜೋಷಾಯ್, ಚಿತ್ರಾಶೆಣೈ, ವಿದ್ಯಾಮೂರ್ತಿ ಹಾಗೂ ಸಾಧು ಕೋಕಿಲ ಅಭಿನಯಿಸಿದ್ದಾರೆ.ಮಂಗಳೂರಲ್ಲಿ ‘ಹಾಯ್’: ರಾಘವೇಂದ್ರ ಕಠಾರೆ, ಸಿ.ರಾಜೇಶ್, ಪವಿತ್ರಾ ಶ್ರಿನಿವಾಸ್, ಮಹೇಂದ್ರಕರ್ ಕೂಡಿ ನಿರ್ಮಿಸುತ್ತಿರುವ ‘ಹಾಯ್’  ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ಸತತವಾಗಿ ಸಾಗುತ್ತಿದೆ. ಸಾಧುಕೋಕಿಲ, ಯಶ್‌ರಾಜ್ ಅಭಿನಯಿಸಿದ ಹಲವು ಹಾಸ್ಯ ಸನ್ನಿವೇಶಗಳ ಚಿತ್ರೀಕರಣ ಪೂರೈಸಿಲಾಗಿದೆ. ಈ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನದ ಜಿ.ಎನ್.ರುದ್ರೇಶ್. ಸಂಗೀತ: ಜೆಸ್ಸಿ ಗಿಫ್ಟ್, ಛಾಯಾಗ್ರಹಣ: ಸತೀಶ್ ರಾಕ್‌ಲೈನ್, ಸಾಹಿತ್ಯ: ನಾಗೇಂದ್ರ ಪ್ರಸಾದ್, ಸಂಭಾಷಣೆ: ಮಳವಳ್ಳಿ ಸಾಯಿಕೃಷ್ಣ, ಸಂಕಲನ: ಕೆ.ಎನ್.ಪ್ರಕಾಶ್, ನೃತ್ಯ: ರಾಮು, ಸಾಹಸ: ಮಾಸ್‌ಮಾದ, ಸಹ ನಿರ್ದೇಶನ: ಜಿ.ಸುರೇಶ್, ನಿರ್ವಹಣೆ: ರಾಜು ಸೋಮಶೇಖರ್.ತಾರಾಗಣದಲ್ಲಿ: ಯಶ್‌ರಾಜ್, ಸಾನಿಯಾ, ಜೈಜಗದೀಶ್, ವಿಜಯಕಾಶಿ, ಸಂಗೀತ, ಸಾಧುಕೋಕಿಲ, ಕಿಲ್ಲರ್ ವೆಂಕಟೇಶ್, ದಡಿಯಾ ಗಿರಿ, ಮಿತ್ರ, ವಿಶ್ವಾಸ್, ಶ್ರಿಕಾಂತ್ ಹೊನ್ನವಳ್ಳಿ, ಶ್ರಿಗೌರಿ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry