ಆ ರಾಕ್ಷಸರನ್ನು ಸುಡಬೇಕು ಯುವತಿಯ ಕಡೆಯ ಹೇಳಿಕೆ

7

ಆ ರಾಕ್ಷಸರನ್ನು ಸುಡಬೇಕು ಯುವತಿಯ ಕಡೆಯ ಹೇಳಿಕೆ

Published:
Updated:

ನವದೆಹಲಿ: ‘ಆ ರಾಕ್ಷಸರನ್ನು ಗಲ್ಲಿಗೆ ಹಾಕಬೇಕು. ಮುಂದೆ ಯಾವ ಕಾಮು­ಕರೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುವುದಿರಲಿ, ತೊಂದರೆಯನ್ನೂ ನೀಡಬಾರದು. ಈ ಕ್ರಿಮಿನಲ್‌ಗಳಿಗೆ ಶಿಕ್ಷೆ ನೀಡುವ ಮೂಲಕ ಅಂತಹ ಎಚ್ಚರಿಕೆ­ಯನ್ನು ನೀಡಬೇಕು. ನಿಜ­ವಾಗಿಯೂ ಅವರನ್ನು ಸುಡಬೇಕು’

––ಇದು ಸಾಮೂಹಿಕ ಅತ್ಯಾಚಾರ­ಕ್ಕೀಡಾದ 23 ವರ್ಷದ ಯುವತಿ ಸಫ್ದರ್‌­ಜಂಗ್‌ ಆಸ್ಪತ್ರೆಯಲ್ಲಿ ಉಪ­ವಿಭಾಗಾಧಿ­ಕಾರಿಗೆ ಡಿ.23ರಂದು ನೀಡಿದ್ದ ಹೇಳಿಕೆ.ಪೆನ್‌ ಹಿಡಿಯವಷ್ಟು ಶಕ್ತಿ ಇಲ್ಲದ ಆಕೆ ತುಂಡು ಕಾಗದದ ಮೇಲೆ ಆರೋಪಿ­­ಗಳಲ್ಲಿ ಕೆಲವರ ಹೆಸರನ್ನು ಗೀಚಿದ್ದಳು.

‘ಕೆಲವರು ನಮ್ಮತ್ತ ಬಂದರು. ಕಬ್ಬಿಣದ ಸಲಾಕೆಗಳಿಂದ ಹೊಡೆ­ದರು’ ಎಂದು ಹಿಂದಿಯಲ್ಲಿ ಬರೆದಿದ್ದಳು.‘ಆ ಬಸ್‌ಗೆ ಹತ್ತಿದ್ದು ಸರಿಯಿಲ್ಲ ಎಂದು ಎನಿಸುತ್ತಿತ್ತು. ಅಷ್ಟರಲ್ಲಿ ನಿರ್ವಾ­ಹಕ ₨20ರ ಟಿಕೆಟ್‌ ಕೊಟ್ಟುಬಿಟ್ಟಿದ್ದ, ಬಸ್‌ ಹೊರಟಿತ್ತು. ಇನ್ನೇನು ಮಾಡು­ವುದು ಎಂದು ನಾವು ಎರಡನೇ ಸಾಲಿ­ನಲ್ಲಿದ್ದ ಸೀಟಿನಲ್ಲಿ ಕೂತೆವು. ಪವನ್‌ ಗುಪ್ತಾ ಮತ್ತು ವಿನಯ್‌ ಶರ್ಮಾ ಅವರು ಪ್ರಯಾಣಿಕರಂತೆ ಸೋಗು ಹಾಕಿ ಕುಳಿತಿದ್ದರು’‘ಒಬ್ಬ ನನ್ನ ಸ್ನೇಹಿತನನ್ನು ಬೈದು, ಹೊಡೆದ. ಅವನು ಪ್ರತಿರೋಧ ವ್ಯಕ್ತಪಡಿ­­ಸುವಷ್ಟರಲ್ಲಿ ಇತರ ದುರು­ಳರು ಸೇರಿ­ಕೊಂಡು ಅವನನ್ನು ಹೊಡೆ­ಯ ತೊಡಗಿ­ದರು. ನಾನು ಅವನನ್ನು ರಕ್ಷಿಸಲು ಮುಂದಾದೆ. ಆದರೆ, ಆ ರಾಕ್ಷಸರು ಸೇಡು ತೀರಿಸಿಕೊಳ್ಳುವಂತೆ ಅವನ ಮೇಲೆ ಮುಗಿಬಿದ್ದರು’.‘ನನ್ನನ್ನು ಬಸ್‌ನ ಹಿಂಭಾಗಕ್ಕೆ ಎಳೆ­ದೊಯ್ದರು. ಬಟ್ಟೆ ಹರಿದು, ಮೈಮೇಲೆ ಬಿದ್ದರು. ಕಬ್ಬಿಣದ ಸಲಾಕೆಯಿಂದ ಮನಬಂದಂತೆ ಎಲ್ಲೆಡೆ ಹೊಡೆದರು. ದೇಹದೊಳಗೆ ಸಲಾಕೆ ತೂರಿಸಿದರು, ಒಂದು ತಾಸಿಗೂ ಹೆಚ್ಚು ಕಾಲ ಅತ್ಯಾಚಾರ ಎಸಗಿದರು. ನೀಚರ ದೌರ್ಜನ್ಯ­ದಿಂದ ಜರ್ಜರಿತಳಾದೆ. ಅರೆ ಪ್ರಜ್ಞೆಗೆ ಜಾರಿದೆ’.‘ನಾವಿಬ್ಬರು ಸತ್ತಿದ್ದೇವೆ ಎಂದು ಭಾವಿಸಿದ ಆ ಕಾಮುಕರು ನಮ್ಮನ್ನು ಬಸ್‌ನಿಂದ ಹೊರಗೆ ಎಸೆದರು. ರಸ್ತೆ ಬದಿ ಬಿದ್ದಿದ್ದ ನಮ್ಮ ಮೈಮೇಲೆ ಬಟ್ಟೆ ಇರಲಿಲ್ಲ. ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದರು’ ಎಂದು ಯುವತಿ ಹೇಳಿಕೆ ನೀಡಿದ್ದಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry