ಆ ವಿಚಾರ

7

ಆ ವಿಚಾರ

Published:
Updated:
ಆ ವಿಚಾರ

ಚಾರಣ ಹೊರಟಿತ್ತು

ಅಲ್ಲೇ

ಆ ರಸ್ತೆಯಂಚಿನ

ಕಲ್ಲುದಾರಿಯ ದಾಟಿ,

ಪೊದೆಗಳಾಚಿನ ಮರದ ಕೆಳಗೆ

ಅದೇ, ಆ ನೀರಿರುವ ಜಾಗವಿದೆಯಲ್ಲ?

ಅಲ್ಲಿ!

ಉಸಿರಾಡಿದ ಪಿಸುಮಾತುಗಳ ಬಿಸಿಗಾಳಿ

ಅದೇ ರಸ್ತೆಗೆ ತಗುಲಿ

ಬಿಸಿಬಿಸಿಯಾಗಿ ಹೊರಟಿತ್ತು.

ಕಿವಿಗಳಿಂದ ಕಿವಿಗಳಿಗೆ,

ಕಣ್ ಸನ್ನೆಯಿಂದ

ಕೈವರೆಗೆ,

ಸುತ್ತೀ ಸುತ್ತಿ ಸುಸ್ತಾಗಿ

ಉಫ್! ಎಂದು ಕುಳಿತ ಆ ವಿಚಾರ

ರಸ್ತೆಯಂಚಿಲ್ಲಿ ಭರ್ರ‌್‌ ಎಂದು ಸಾಗಿದ

ಯಾವುದೋ ಗಾಡಿಯ ರಭಸಕ್ಕೆ

ತತ್ತರಿಸಿ ಎಚ್ಚತ್ತು ಮತ್ತೆ

ಸುತ್ತಿ ಹೊರಟಿತು ಚಾರಣ.

ಪಿಸುಮಾತೂ ನಿಂತ ಮೌನಕ್ಕೆ

ಇದೂ ಒಂದು ಕಾರಣ! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry