ಸೋಮವಾರ, ಆಗಸ್ಟ್ 19, 2019
21 °C

ಆ. 15ರಂದು `ಸಾಕ್ಷರತಾ ದಿನಾಚರಣೆ'

Published:
Updated:

ಕುಷ್ಟಗಿ: ಸಾಕ್ಷರತಾ ದಿನಾಚರಣೆಗೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯಿತಿಯಲ್ಲಿ ಸೋಮವಾರ ಲೋಕಶಿಕ್ಷಣ ಸಮಿತಿ ಪ್ರೇರಕರ ಪೂರ್ವಭಾವಿ ಸಭೆ ನಡೆಯಿತು.ಲೋಕಶಿಕ್ಷಣ ಸಮಿತಿ ಜಿಲ್ಲಾ ಕಾರ್ಯಕ್ರಮ ಸಹಾಯಕ ಸೋಮಶೇಖರ ತುಪ್ಪದ ಮಾತನಾಡಿ, ಸ್ವಾತಂತ್ರ್ಯೋತ್ಸವದ ದಿನ ರಾಷ್ಟ್ರಧ್ವಜಾರೋಹಣದ ಜೊತೆಗೆ ಸಾಕ್ಷರತಾ ಧ್ವಜಾರೋಹಣವನ್ನೂ ನೆರವೇರಿಸಿ ಸಾಕ್ಷರತೆ ಮಹತ್ವ ಕುರಿತು ಪ್ರಚಾರ ನಡೆಸಬೇಕು.ಸಾಕ್ಷರತಾ ದಿನಾಚರಣೆ ನಡೆಸುವ ಸಂಬಂಧ ಪೂರ್ವಭಾವಿ ಸಭೆ ನಡೆಸಿ ಗ್ರಾಮಸ್ಥರು, ಚುನಾಯಿತ ಪ್ರತಿನಿಧಿಗಳೊಂದಿಗೆ ಸಮಾಲೋಚಿಸುವಂತೆ ಸೂಚಿಸಿದರು.ಎರಡನೇ ಹಂತದ ಸಾಕ್ಷರ ಭಾರತ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳು, ಲೋಕಶಿಕ್ಷಣ ಕೇಂದ್ರಗಳ ಚಟುವಟಿಕೆ ಕುರಿತು ಜನರಿಗೆ ಮಾಹಿತಿ ನೀಡಬೇಕು. ಅಲ್ಲದೇ ಆ. 25ರಂದು ಮೂಲ ಸಾಕ್ಷರತಾ ಪರೀಕ್ಷೆ ನಡೆಯುವ ಬಗ್ಗೆ ಸಾರ್ವಜನಿಕರಿಗೆ ವಿವರಿಸುವಂತೆ        ತಿಳಿಸಿದರು.ಲೋಕಶಿಕ್ಷಣ ಸಮಿತಿ ತಾಲ್ಲೂಕು ಸಂಯೋಜಕ ಬಾಳಪ್ಪ ಬೇವಿನಗಿಡದ, ಪ್ರಮುಖರಾದ ಗಂಗಯ್ಯ ವಸ್ತ್ರದ ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸೇರಿದ ಪ್ರೇರಕರು ಸಭೆಯಲ್ಲಿದ್ದರು.ಪ್ರೇರಕರನ್ನು ಒಳಗೊಂಡ `ಅಪ್ನಾದೇಶ ಬಳಗ' ರಚಿಸಲಾಯಿತು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಶ್ರಮದಾನ, ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಆಹ್ವಾನಿಸಿ ಮಾಹಿತಿ ತಿಳಿಸುವುದು ಮತ್ತಿತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದಾಗಿ ಪ್ರೇರಕರು ಸಭೆಗೆ ತಿಳಿಸಿದರು. ಪ್ರೇರಕ ಎಸ್.ಬಿ. ಶೆಟ್ಟರ ಸ್ವಾಗತಿಸಿದರು. ಪರಶುರಾಮ ಚೌಡ್ಕಿ ವಂದಿಸಿದರು.ಪ್ರೇರಕರ ಒಕ್ಕೂಟ: ತಾಲ್ಲೂಕಿನ ಸಾಕ್ಷರತಾ ಪ್ರೇರಕರ ಒಕ್ಕೂಟ ರಚಿಸಲಾಗಿದ್ದು ಪದಾಧಿಕಾರಿಗಳ ವಿವರ ಈ ರೀತಿ ಇದೆ. ಕೆ.ಅಜ್ಮೀರ್ ಗೌರವಾಧ್ಯಕ್ಷ. ಪರಶುರಾಮ ಚೌಡ್ಕಿ ಅಧ್ಯಕ್ಷ. ಪದ್ಮಾವತಿ ಮುದೇನೂರು ಉಪಾಧ್ಯಕ್ಷೆ. ವೀರಪ್ಪ ನಾಯಕ ಕಾರ್ಯದರ್ಶಿ. ಲೋಕಪ್ಪ ಚಳಗೇರಾ ಖಜಾಂಚಿ. ರಾಘವೇಂದ್ರ ಮನ್ನಾಪುರ, ಹೇಮಾಕ್ಷಿ ಜಾಗೀರಗುಡದೂರು ಸಂಘಟನಾ        ಕಾರ್ಯದರ್ಶಿಗಳು.

Post Comments (+)