ಆ. 4: ಗ್ರಾಪಂಗಳ 560 ಸ್ಥಾನಗಳಿಗೆ ಚುನಾವಣೆ

ಶನಿವಾರ, ಜೂಲೈ 20, 2019
28 °C

ಆ. 4: ಗ್ರಾಪಂಗಳ 560 ಸ್ಥಾನಗಳಿಗೆ ಚುನಾವಣೆ

Published:
Updated:

ಬೆಂಗಳೂರು: ರಾಜ್ಯದ 55 ತಾಲ್ಲೂಕುಗಳ 489 ಗ್ರಾಮ ಪಂಚಾಯತಿಗಳಲ್ಲಿ ತೆರವಾಗಿರುವ ಒಟ್ಟು 560 ಗ್ರಾಮಪಂಚಾಯತಿ ಸ್ಥಾನಗಳಿಗೆ ಆಗಸ್ಟ್ 4ರಂದು ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.ಚುನಾವಣೆ ಸಂಬಂಧ ಬುಧವಾರ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಇದೇ 24 ಕೊನೆ ದಿನ.  ಜುಲೈ 25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ಜುಲೈ 27ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

 

ಆ. 4ರಂದು ಭಾನುವಾರ ಮತದಾನ ನಡೆಯಲಿದ್ದು ಆ.7ರಂದು ಸಂಬಂಧಪಟ್ಟ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಗ್ರಾಮ ಪಂಚಾಯತಿ ಚುನಾವಣೆ ನಡೆಯುವ ಕ್ಷೇತ್ರದ ವ್ಯಾಪ್ತಿಯಲ್ಲಿ ಜುಲೈ 17ರಿಂದ ಆ. 7ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.ಬರ ಪರಿಹಾರ, ಪ್ರವಾಹ ಇತ್ಯಾದಿ ಪ್ರಕೃತಿ ವಿಕೋಪ ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry