ಶನಿವಾರ, ಮೇ 8, 2021
20 °C

ಇಂಗ್ಲಿಷ್ ವಿರೋಧದಿಂದ ದಲಿತರಿಗೆ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಗ್ಲಿಷ್ ವಿರೋಧದಿಂದ ದಲಿತರಿಗೆ ವಂಚನೆ

ಬಸವನಬಾಗೇವಾಡಿ: ಶಿಕ್ಷಣದ ಸಾರ್ವತ್ರೀಕರಣ ದಿಂದ ದಲಿತರು ಹಾಗೂ ಹಿಂದುಳಿದವರಿಗೆ ಶಿಕ್ಷಣ ಲಭಿಸಿತು. ಗ್ರಾಮೀಣ ಭಾಗದ ಕನ್ನಡ ಶಾಲೆಗಳು ಕೇವಲ ದಲಿತರು, ಗ್ರಾಮೀಣ ಭಾಗದ ಜನತೆ ಯಿಂದ ಮಾತ್ರ ಉಳಿದುಕೊಂಡಿವೆ ಎಂದು ಕುವೆಂಪು ವಿ.ವಿ. ಪ್ರಾಧ್ಯಾಪಕ ಡಾ. ಶಿವಾನಂದ ಕೆಳಗಿನಮನಿ ಹೇಳಿದರು.ಸ್ಥಳೀಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ದಲಿತ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಉದ್ಘಾಟನೆ, ವಿಚಾರ ಸಂಕಿರಣ ಹಾಗೂ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ  ಅವರು ಮಾತನಾಡಿದರು.  ಒಂದನೇ ತರಗತಿಯಿಂದ ಇಂಗ್ಲಿಷ್ ಬೇಡ ಎಂದು ವಾದಿಸುವವರು ಹಿಂದುಳಿದ ದಲಿತ ಮಕ್ಕಳಿಗೆ ವಂಚನೆ ಮಾಡಿದಂತಾಗುತ್ತದೆ ಎಂದು ಅವರು ಹೇಳಿದರು.  ಕನ್ನಡ ಭಾಷೆ ಅಭಿಮಾನದ ಭಾಷೆ, ಇಂಗ್ಲಿಷ್ ಅನ್ನದ ಭಾಷೆ.  ಚಿಕ್ಕವಯಸ್ಸಿನಲ್ಲಿಯೇ ಇಂಗ್ಲಿಷ್‌ೆ ಕಲಿಯಬೇಕಾದುದು ಇಂದಿನ ಅಗತ್ಯ. ಕನ್ನಡದ ಬಗ್ಗೆ ಮಾತನಾಡುವವರು, ತಮ್ಮ ಮಕ್ಕಳನ್ನು ಯಾವ ಶಾಲೆಗೆ ಕಳುಹಿಸುತ್ತಿದ್ದಾರೆಂಬುದನ್ನು ಅರಿಯಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್.ಕೆ. ಬೆಳ್ಳುಬ್ಬಿ, `ಕವಿ ಡಾ. ಸಿದ್ದಲಿಂಗಯ್ಯ ದಲಿತ ಸಾಹಿ ತ್ಯಕ್ಕೆ ಪ್ರೇರಣೆ ನೀಡಿದ್ದು ಹಲವಾರು ಜನತೆಗೆ ಧೈರ್ಯವಾಗಿ ಕಾರ್ಯನಿರ್ವಹಣೆಗೆ ಪ್ರೇರಕ ಶಕ್ತಿಯಾಗಿದ್ದಾರೆ~ ಎಂದರು.ವಚನ ಸಾಹಿತ್ಯದಲ್ಲಿ ದಲಿತ ಪ್ರಜ್ಞೆಯ ಕುರಿತು ಗುಲ್ಬರ್ಗ ವಿ.ವಿ. ಪ್ರಾಧ್ಯಾಪಕ ಡಾ. ಎಚ್.ಟಿ. ಪೋತೆ ಮಾತನಾಡಿ, ಬಸವನಾಡಿನಲ್ಲಿ ಇಂದಿಗೂ ಮಾನಸಿಕ ಅಸ್ಪೃಶ್ಯತೆ ಇದೆ ಎಂದು ಹೇಳಿದರು.ಮೇಲ್ವರ್ಗದವರಿಗೆ ಬಸವಣ್ಣ ಗೌರವದ ಸಂಕೇತವಾದರೆ ದಲಿತರಿಗೆ ಬದುಕಿನ ಸಂಕೇತ ವಾಗಿದ್ದಾರೆ. ಬಸವಣ್ಣನವರ ವಿಚಾರಗಳು, ಚಿಂತನೆ ಗಳು, ಕಾಯಕ ಪ್ರಜ್ಞೆ ದಲಿತರಿಂದ ಜೀವಂತಿಕೆ ಪಡೆದಿವೆ ಎಂದರು.ಸಾನಿಧ್ಯವನ್ನು ವಿರಕ್ತಮದ ಸಿದ್ದಲಿಂಗದೇವರು ವಹಿಸಿದ್ದರು. ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಂ. ಸಾಣಕರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಸವರಾಜ ಸಬರದ, ಆರ್.ಆರ್. ಹಂಚನಾಳ, ಪುರಸಭೆ ಅಧ್ಯಕ್ಷ ಜಗು ಕೊಟ್ರಶೆಟ್ಟಿ, ಜನಪದ ಸಾಹಿತಿ ಕಾ.ಹು. ಬಿಜಾಪುರ, ಗೋಪಾಲ ಅಥರ್ಗಾ, ಎಸ್.ಆರ್. ಮರಡಿಮನಿ, ಮಲ್ಲಿಕಾರ್ಜುನ ನಾಯಕ, ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮುತ್ತುರಾಜ ಹೆಬ್ಬಾಳ, ಕವಿ ಭೀಮರಾಯ ಮಾದರ ಮೊದಲಾದವರಿದ್ದರು. ಕವಿ ಭೀಮ ರಾಯ ಮಾದರ ಅವರ  ಹೊಸ ಹಾಡು  ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.ದಲಿತ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮುತ್ತುರಾಜ ಹೆಬ್ಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್.ಎಸ್. ಹಳ್ಳಿ ಸ್ವಾಗತಿಸಿದರು. ವೈ.ಪಿ. ಧರ್ಮಗಿರಿ ಹಾಗೂ ಎಸ್.ಎಲ್. ಓಂಕಾರ ಕಾರ್ಯಕ್ರಮ ನಿರೂಪಿಸಿದರು. ಪಿ.ವೈ. ಕೋಳೂರ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.