ಇಂಗ್ಲೆಂಡ್‌ಗೆ ರೋಚಕ ಗೆಲುವು

7

ಇಂಗ್ಲೆಂಡ್‌ಗೆ ರೋಚಕ ಗೆಲುವು

Published:
Updated:

ಕಾರ್ಡಿಫ್‌ (ಎಎಫ್‌ಪಿ): ಗೆಲುವಿನ ತುತ್ತು ಕೈ ಜಾರಿ ಹೋಗುವ ಭೀತಿಯಲ್ಲಿದ್ದಾಗ ಜಾಸ್‌ ಬಟ್ಲರ್‌ ಕೊನೆಯ ಓವರ್‌ನ  ಮೊದಲ ಎಸೆತದಲ್ಲಿ ಸಿಕ್ಸರ್‌ ಸಿಡಿಸಿ ಇಂಗ್ಲೆಂಡ್‌ ತಂಡಕ್ಕೆ ಜಯ ತಂದುಕೊಟ್ಟರು. ಗೆಲುವಿನ ಆಸೆ ಕಂಡಿದ್ದ ಆಸ್ಟ್ರೇಲಿಯಾ ತಂಡ ನಿರಾಸೆ ಕಡಲಲ್ಲಿ ಮುಳುಗಿತು.ಸೋಫಿಯಾ ಗಾರ್ಡನ್‌ ಕ್ರೀಡಾಂಗಣದಲ್ಲಿ ಶನಿ­ವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆಸೀಸ್‌ 48.2 ಓವರ್‌ಗಳಲ್ಲಿ 227 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡಿತು. ಈ ಗುರಿಯನ್ನು ಇಂಗ್ಲೆಂಡ್‌ ತಂಡ 49.3 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಮುಟ್ಟಿತು. ಐದು ಪಂದ್ಯಗಳ ಸರಣಿ 1–1ರಲ್ಲಿ ಸಮಬಲವಾಯಿತು. ಪ್ರವಾಸಿ ತಂಡ ಮೊದಲ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ಈ ತಂಡಕ್ಕ ಸಾಧ್ಯವಾಗಲಿಲ್ಲ. ಆಸೀಸ್‌ 57 ರನ್‌ ಕಲೆ ಹಾಕುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಮಧ್ಯಮ ಕ್ರಮಾಂಕದ ಜಾರ್ಜ್‌ ಬೈಲಿ (87, 91ಎಸೆತ, 5 ಬೌಂಡರಿ, 3 ಸಿಕ್ಸರ್) ಆಸರೆಯಾದರು.ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ 48.2 ಓವರ್‌ಗಳಲ್ಲಿ 227. (ಶಾನ್‌ ಮಾರ್ಷ್‌ 25, ಮೈಕಲ್‌ ಕ್ಲಾರ್ಕ್‌ 22, ಜಾರ್ಜ್‌ ಬೈಲಿ 87, ಅಡಮ್‌ ವೊಗಸ್ 30, ಮ್ಯಾಥ್ಯೂ ವೇಡ್‌ 36; ಸ್ಟೀವನ್‌ ಫಿನ್‌ 43ಕ್ಕೆ2, ಬೈಡ್‌ ರಂಕಿನ್‌ 31ಕ್ಕೆ2, ರವಿ ಬೋಪಾರ 45ಕ್ಕೆ1, ಜೇಮ್ಸ್‌ ಟ್ರೆಡ್‌ವೆಲ್‌ 53ಕ್ಕೆ3). ಇಂಗ್ಲೆಂಡ್‌ 49.3 ಓವರ್‌ಗಳಲ್ಲಿ 7 ವಿಕೆಟ್‌ಗೆ 231.ಫಲಿತಾಂಶ: ಇಂಗ್ಲೆಂಡ್‌ಗೆ 3 ವಿಕೆಟ್‌ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry