ಇಂಗ್ಲೆಂಡ್‌ಗೆ ಸುಲಭ ಗೆಲುವು

7
ಕ್ರಿಕೆಟ್‌: ಮಾರ್ಗನ್‌, ಬೋಪಾರ ಶತಕ

ಇಂಗ್ಲೆಂಡ್‌ಗೆ ಸುಲಭ ಗೆಲುವು

Published:
Updated:

ಡಬ್ಲಿನ್‌ (ಎಪಿ): ಎಯೋನ್‌ ಮಾರ್ಗನ್‌ ಹಾಗೂ ರವಿ ಬೋಪಾರ ಅವರ ಅಜೇಯ ಶತಕಗಳ ನೆರವಿನಿಂದ ಇಂಗ್ಲೆಂಡ್‌ ತಂಡದವರು ಇಲ್ಲಿ ನಡೆದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಐರ್ಲೆಂಡ್‌ ತಂಡವನ್ನು ಮಣಿಸಿದ್ದಾರೆ.ಐರ್ಲೆಂಡ್‌ ನೀಡಿದ 270 ರನ್‌ಗಳ ಗುರಿಯನ್ನು ಇಂಗ್ಲೆಂಡ್‌ ತಂಡದವರು 43 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ಕಳೆದುಕೊಂಡು ತಲುಪಿದರು.ಮೊದಲು ಬ್ಯಾಟ್‌ ಮಾಡಿದ ಐರ್ಲೆಂಡ್‌ ತಂಡಕ್ಕೆ ನೆರವಾಗಿದ್ದು ಆರಂಭಿಕ ಬ್ಯಾಟ್ಸ್‌ಮನ್‌ ವಿಲಿಯಮ್‌ ಪೋರ್ಟರ್‌ಫೀಲ್ಡ್‌. ಆದರೆ ಉಳಿದವ­ರಿಂದ ಉತ್ತಮ ಹೋರಾಟ ಮೂಡಿ­ಬರಲಿಲ್ಲ. 142 ಎಸೆತಗಳನ್ನು ಎದುರಿಸಿದ ಪೋರ್ಟರ್‌ಫೀಲ್ಡ್‌ ಒಂದು ಸಿಕ್ಸರ್‌ ಹಾಗೂ 14 ಬೌಂಡರಿಗಳ ನೆರವಿನಿಂದ 112 ರನ್‌ ಗಳಿಸಿದರು. ಅವರ ನೆರವಿನಿಂದಾಗಿ ಐರ್ಲೆಂಡ್‌ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 269 ರನ್‌ ಗಳಿಸಲು ಸಾಧ್ಯವಾಯಿತು.ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಆರಂಭದಲ್ಲಿಯೇ ಆಘಾತ ಅನುಭವಿಸಿತು. 48 ರನ್‌ ಗಳಿ­­ಸು­­­ವಷ್ಟ­­ರಲ್ಲಿ 4 ವಿಕೆಟ್‌ ಕಳೆದು­ಕೊಂ­ಡಿತ್ತು. ಆದರೆ ಮಾರ್ಗನ್‌ ಹಾಗೂ ಬೋಪಾರ ನಡುವಿನ ಐದನೇ ವಿಕೆಟ್‌ ಜೊತೆಯಾಟ ಪಂದ್ಯಕ್ಕೆ ಹೊಸ ತಿರುವು ನೀಡಿತು. ಇವರಿಬ್ಬರು ಮುರಿಯದ ಐದನೇ ವಿಕೆಟ್‌ಗೆ 226 ರನ್‌ ಸೇರಿಸಿದರು.106 ಎಸೆತ ಎದುರಿಸಿದ ಮಾರ್ಗನ್‌ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ 124 ರನ್‌ ಗಳಿಸಿದರು. ಅಬ್ಬರಿಸಿದ ಬೋಪಾರ ಕೇವಲ 75 ಎಸೆತಗಳಲ್ಲಿ 101 ರನ್‌ ಕಲೆಹಾಕಿದರು, ಅದರಲ್ಲಿ 10 ಬೌಂಡರಿ ಹಾಗೂ 5 ಸಿಕ್ಸರ್‌ಗಳಿದ್ದವು.ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌: 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 269 (ವಿಲಿಯಮ್‌ ಪೋರ್ಟರ್‌ಫೀಲ್ಡ್‌ 112, ನಿಯಾಲ್‌ ಓಬ್ರಿಯನ್‌ 26, ಜಾನಿ ಮೂನಿ 27; ಬಾಯ್ಡ್‌ ರಂಕಿನ್‌ 46ಕ್ಕೆ4, ಜೇಮ್ಸ್‌ ಟ್ರೆಡ್‌ವೆಲ್‌ 35ಕ್ಕೆ2); ಇಂಗ್ಲೆಂಡ್‌: 43 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 274 (ಎಯೋನ್‌ ಮಾರ್ಗನ್‌ ಔಟಾಗದೆ 124, ರವಿ ಬೋಪಾರ ಔಟಾಗದೆ 101; ಟಿಮ್‌ ಮುರ್ತಾಗ್‌ 33ಕ್ಕೆ3). ಫಲಿತಾಂಶ: ಇಂಗ್ಲೆಂಡ್‌ಗೆ 6 ವಿಕೆಟ್‌ ಜಯ. ಪಂದ್ಯ ಶ್ರೇಷ್ಠ: ಎಯೊನ್‌ ಮಾರ್ಗನ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry