ಭಾನುವಾರ, ಜೂನ್ 20, 2021
20 °C
ಕ್ರಿಕೆಟ್‌: ಪ್ರವಾಸಿ ಬಳಗದ ಜಯಕ್ಕೆ ಬೋಪಾರ–ಬ್ರಾಡ್‌ ಬಲ

ಇಂಗ್ಲೆಂಡ್‌ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾರ್ತ್‌ ಸೌಂಡ್‌, ಆ್ಯಂಟಿಗಾ (ಎಎಫ್‌ಪಿ): ರವಿ ಬೋಪಾರ ಹಾಗೂ ಸ್ಟುವರ್ಟ್‌ ಬ್ರಾಡ್‌ ಅವರ ಅಮೂಲ್ಯ ಜೊತೆ ಯಾಟದ ನೆರವಿನಿಂದ ಇಂಗ್ಲೆಂಡ್‌ ತಂಡದವರು ಇಲ್ಲಿ ನಡೆದ ವೆಸ್ಟ್‌ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಮೂರು ವಿಕೆಟ್‌ಗಳ ಗೆಲುವು ದಾಖಲಿಸಿದ್ದಾರೆ.ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ವೆಸ್ಟ್‌ಇಂಡೀಸ್‌ 44.2 ಓವರ್‌ಗಳಲ್ಲಿ ಕೇವಲ 159 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು. ಈ ಗುರಿಯನ್ನು ಇಂಗ್ಲೆಂಡ್‌ ತಂಡದವರು 44.5 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ತಲುಪಿದರು.ಸಿಮನ್ಸ್‌ ಆಸರೆ: ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಲು ಅವಕಾಶ ಪಡೆದ ಕೆರಿಬಿಯನ್‌ ಬಳಗ ಆರಂಭಿಕ ಆಘಾತಕ್ಕೆ ಒಳಗಾಯಿತು.ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಬಂದ ಲೆಂಡ್ಲ್‌ ಸಿಮನ್ಸ್‌ ತಂಡಕ್ಕೆ ಆಸರೆಯಾದರು. 120 ಎಸೆತ ಎದುರಿಸಿದ ಅವರು 4 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 70 ರನ್‌ ಗಳಿಸಿದರು. ಇನ್ನುಳಿದವರು ಸಂಪೂರ್ಣ ವಿಫಲರಾದರು.ಸುಲಭ ಗುರಿ ಎದುರು ಇಂಗ್ಲೆಂಡ್‌ ಪರದಾಡಿತು. ಆರಂಭಿಕ ಬ್ಯಾಟ್ಸ್‌ಮನ್‌ ಮೈಕೆಲ್‌ ಲಂಬ್‌ 39 ರನ್‌ ಗಳಿಸಿದರು. ಆದರೆ ಎಂಟನೇ ವಿಕೆಟ್‌ ಜೊತೆಯಾಟ ಪಂದ್ಯಕ್ಕೆ ತಿರುವು ನೀಡಿತು. ರವಿ ಬೋಪಾರ  (ಔಟಾಗದೆ 38) ಹಾಗೂ ಸ್ಟುವರ್ಟ್‌ ಬ್ರಾಡ್‌ (ಔಟಾಗದೆ 28) ಅವರು 58 ರನ್‌ ಸೇರಿಸಿ ತಂಡವನ್ನು ಆತಂಕದಿಂದ ಪಾರು ಮಾಡಿದರು.ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ಇಂಡೀಸ್‌: 44.2 ಓವರ್‌ಗಳಲ್ಲಿ 159 (ಕೀರನ್‌ ಪೊವೆಲ್‌ 16, ಲೆಂಡ್ಲ್‌ ಸಿಮನ್ಸ್‌ 70, ಡ್ವೇನ್‌ ಬ್ರಾವೊ 20;  ಜೋ ರೂಟ್‌ 15ಕ್ಕೆ2, ಜೇಮ್ಸ್‌ ಟ್ರೆಡ್‌ವೆಲ್‌ 39ಕ್ಕೆ2, ಸ್ಟೀಫನ್‌ ಪ್ಯಾರಿ 32ಕ್ಕೆ3); ಇಂಗ್ಲೆಂಡ್‌: 44.5 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 (ಮೈಕೆಲ್‌ ಲಂಬ್‌ 39, ಜೋ ರೂಟ್‌ 23, ರವಿ ಬೋಪಾರ ಔಟಾಗದೆ 38, ಸ್ಟುವರ್ಟ್‌ ಬ್ರಾಡ್‌ ಔಟಾಗದೆ 28; ಡ್ವೇನ್‌ ಬ್ರಾವೊ 41ಕ್ಕೆ2, ನಿಕಿತಾ ಮಿಲ್ಲರ್‌ 28ಕ್ಕೆ2): ಫಲಿತಾಂಶ: ಇಂಗ್ಲೆಂಡ್‌ಗೆ ಮೂರು ವಿಕೆಟ್‌ ಗೆಲುವು ಹಾಗೂ ಸರಣಿ 1–1 ಸಮಬಲ.

ಪಂದ್ಯ ಶ್ರೇಷ್ಠ: ಸ್ಟೀಫನ್‌ ಪ್ಯಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.