ಬುಧವಾರ, ಜೂನ್ 16, 2021
22 °C

ಇಂಗ್ಲೆಂಡ್‌: ವಿದ್ಯಾರ್ಥಿ ವೀಸಾ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಇಂಗ್ಲೆಂಡ್‌ಗೆ ತೆರಳಿ ಅಧ್ಯಯನ ಮಾಡುವ ಭಾರತೀಯ ವಿದ್ಯಾರ್ಥಿಗಳ ಪ್ರಮಾಣ ಇಳಿಕೆ­ಯಾಗಿದೆ. ಇದರಿಂದಾಗಿ ಕಳೆದ ವರ್ಷ ವೀಸಾ ನೀಡಿಕೆಯಲ್ಲಿ ಶೇ 21 ರಷ್ಟು ಕಡಿಮೆಯಾಗಿದೆ. ಭಾರತೀಯ ವಿದ್ಯಾ­ರ್ಥಿ­ಗಳು ಲಂಡನ್‌ನಲ್ಲಿ  ಹತ್ಯೆ ಯಾಗಿ­ರುವುದು ಹಾಗೂ ಇದಕ್ಕೆ ಪೊಲೀಸರು ಕೈಗೊಳ್ಳುವ ತನಿಖೆ ಮತ್ತು ರೂಪಾಯಿ ಅಪಮೌಲವೇ ಇಳಿಕೆಗೆ  ಕಾರಣ.2013ರಲ್ಲಿ ಭಾರತದ 13,608 ವಿದ್ಯಾರ್ಥಿಗಳು ವೀಸಾ ಪಡೆದು ಅಧ್ಯ ಯನಕ್ಕೆ ತೆರಳಿದ್ದರು. ಇದು ಹಿಂದಿನ ವರ್ಷಕ್ಕಿಂತ ಶೇ 21 ರಷ್ಟು ಕಡಿಮೆ.‘ವಿದ್ಯಾರ್ಥಿ ವೀಸಾ ಕಡಿಮೆಯಾಗಿ ರುವುದಕ್ಕೆ ಒಂದೇ ಕಾರಣವಿಲ್ಲ. ಇದರಲ್ಲಿ ಕೆಲವು ತಪ್ಪುಕಲ್ಪನೆಗಳು ಇವೆ.  ಬ್ರಿಟನ್‌ಗೆ ಅಧ್ಯಯನ ಮಾಡಲು ವೀಸಾ ಪಡೆ ಯುವುದು ತುಂಬಾ ಕಷ್ಟದ ಕೆಲಸ ಎಂದು ಭಾವಿಸುತ್ತಾರೆ. ಅಲ್ಲದೆ ಅಧ್ಯಯನ ಮುಗಿದ ಮೇಲೆ ಕೆಲಸ ಸಿಕ್ಕುವುದಿಲ್ಲ ಎಂದುಕೊ­ಳ್ಳು­ತ್ತಾರೆ’ ಎನ್ನುತ್ತಾರೆ ಬ್ರಿಟನ್‌ನಲ್ಲಿನ ಭಾರ­ತದ ಹೈಕಮಿಷನರ್‌ ಜೇಮ್ಸ್‌ ಬೇವನ್‌. ನಗರದಲ್ಲಿ ವೀಸಾ ಕೇಂದ್ರ­ವೊಂದನ್ನು ಉದ್ಘಾಟಿಸಿದ ಅವರು ಮಾತನಾಡಿ, ವೀಸಾ ವಿತರಣೆಯಲ್ಲಿನ ಇಳಿಕೆ ಕುರಿತು ವಿವರಿಸಿದರು.2011 ರ ಡಿಸೆಂಬರ್‌ 26 ರಂದು ಮಹಾರಾಷ್ಟ್ರದ ಪುಣೆಯ ವಿದ್ಯಾರ್ಥಿ ಅನುಜ್‌ ಬಿಡ್ವೆ ಎಂಬುವವರನ್ನು ಸ್ಥಳೀಯ ಕಾರ್ಖಾನೆ ಕೆಲಸಗಾರನೊಬ್ಬ ಗುಂಡಿಟ್ಟು ಸಾಯಿಸಿದ ನಂತರ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಹೆದರುವಂತಾಗಿತ್ತು.‘ಈ ರೀತಿಯ ಘಟನೆ ತುಂಬಾ ತುಂಬಾ ಅಪರೂಪ. ಬ್ರಿಟನ್‌ ಭಾರ­ತದ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿದೆ’ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.