ಇಂಗ್ಲೆಂಡ್ ಅಲ್ಪ ಮೊತ್ತ

ಮಂಗಳವಾರ, ಜೂಲೈ 23, 2019
20 °C

ಇಂಗ್ಲೆಂಡ್ ಅಲ್ಪ ಮೊತ್ತ

Published:
Updated:

ನಾಟಿಂಗ್‌ಹ್ಯಾಂ: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಆ್ಯಷಸ್ ಕ್ರಿಕೆಟ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಪ್ರಥಮ ದಿನದಾಟದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ.ಟ್ರೆಂಟ್ ಬ್ರಿಜ್ ಕ್ರೀಡಾಂಗಣದಲ್ಲಿ ಬುಧವಾರ ಟಾಸ್ ಗೆದ್ದು ಬ್ಯಾಟ್ ಮಾಡಿದ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 215 ರನ್‌ಗಳಿಗೆ ಆಲೌಟಾಯಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆಸೀಸ್ ಆರಂಭಿಕ ಕುಸಿತ ಅನುಭವಿಸಿದ್ದು, ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ 10 ಓವರ್‌ಗಳಲ್ಲಿ 3 ವಿಕೆಟ್‌ಗೆ 31ಗಳಿಸಿತ್ತು.ಅಲಸ್ಟೇರ್ ಕುಕ್ ನೇತೃತ್ವದ ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. 50 ರನ್‌ಗಳಿಗೆ ಐದು ವಿಕೆಟ್ ಪಡೆದ ಪೀಟರ್ ಸಿಡ್ಲ್ ಆತಿಥೇಯ ತಂಡದ ಪತನಕ್ಕೆ ಕಾರಣರಾದರು. ಜೊನಾಥನ್ ಟ್ರಾಟ್ (48) ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡರು.ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: ಮೊದಲ ಇನಿಂಗ್ಸ್ 59 ಓವರ್‌ಗಳಲ್ಲಿ 215 (ಜೋ ರೂಟ್ 30, ಜೊನಾಥನ್ ಟ್ರಾಟ್ 48, ಇಯಾನ್ ಬೆಲ್ 25, ಜೇಮಿ ಬೈಸ್ಟೋವ್ 37, ಸ್ಟುವರ್ಟ್ ಬ್ರಾಡ್ 24, ಪೀಟರ್ ಸಿಡ್ಲ್ 50ಕ್ಕೆ 5, ಜೇಮ್ಸ ಪ್ಯಾಟಿನ್ಸನ್ 69ಕ್ಕೆ 3, ಮಿಷೆಲ್ ಸ್ಟಾರ್ಕ್ 54ಕ್ಕೆ2) ಆಸ್ಟ್ರೇಲಿಯಾ: ಮೊದಲ   ಇನಿಂಗ್ಸ್ 10 ಓವರ್‌ಗಳಲ್ಲಿ 3 ವಿಕೆಟ್‌ಗೆ 31

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry