ಗುರುವಾರ , ಮಾರ್ಚ್ 4, 2021
16 °C

ಇಂಗ್ಲೆಂಡ್ ತಂಡಕ್ಕೆ ಫಿನ್ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಗ್ಲೆಂಡ್ ತಂಡಕ್ಕೆ ಫಿನ್ ಸೇರ್ಪಡೆ

ಬರ್ಮಿಂಗ್‌ಹ್ಯಾಮ್ (ಎಎಫ್‌ಪಿ): ಪಾಕಿಸ್ತಾನ ಎದುರು ನಡೆಯಲಿರುವ ಮೂರನೇ ಟೆಸ್ಟ್‌ನಲ್ಲಿ ಆಡುವ ಇಂಗ್ಲೆಂಡ್‌ ತಂಡದಲ್ಲಿ ಸ್ಟೀವನ್ ಫಿನ್‌ ಅವರನ್ನು ಸೇರ್ಪಡೆ ಮಾಡಲಾಗಿದೆ.ಗಾಯಗೊಂಡಿರುವ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಅವರ ಬದಲಿಗೆ ಫಿನ್ ಸ್ಥಾನ ಪಡೆದುಕೊಂಡಿದ್ದಾರೆ. 33 ಟೆಸ್ಟ್ ಪಂದ್ಯಗಳನ್ನು ಆಡಿರುವ ಫಿನ್ 120 ವಿಕೆಟ್‌ಗಳನ್ನು ಗಳಿಸಿದ್ದಾರೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1–1ರ ಸಮಬಲ ಸಾಧಿಸಿವೆ. ಇನ್ನೂ ಎರಡು ಪಂದ್ಯಗಳು ಬಾಕಿಯಿವೆ. 

ಇಂಗ್ಲೆಂಡ್ ತಂಡ ಇಂತಿದೆಅಲಸ್ಟರ್ ಕುಕ್ (ನಾಯಕ), ಅಲೆಕ್ಸ್ ಹೇಲ್ಸ್‌, ಜೋ ರೂಟ್, ಜೇಮ್ಸ್ ವಿನ್ಸ್, ಗ್ಯಾರಿ ಬ್ಯಾಲೆನ್ಸ್, ಜಾನಿ ಬೇಸ್ಟೋ (ವಿಕೆಟ್‌ಕೀಪರ್),  ಮೋಯಿನ್ ಅಲಿ, ಕ್ರಿಸ್ ವೋಕ್ಸ್, ಸ್ಟುವರ್ಟ್ ಬ್ರಾಡ್, ಸ್ಟೀವನ್ ಫಿನ್, ಜೇಮ್ಸ್ ಆ್ಯಂಡರ್ಸನ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.