ಇಂಟರ್‌ನೆಟ್‌ನಲ್ಲಿ ಸಿಎಂ ಸದಾ ಲಭ್ಯ

7

ಇಂಟರ್‌ನೆಟ್‌ನಲ್ಲಿ ಸಿಎಂ ಸದಾ ಲಭ್ಯ

Published:
Updated:
ಇಂಟರ್‌ನೆಟ್‌ನಲ್ಲಿ ಸಿಎಂ ಸದಾ ಲಭ್ಯ

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಗೃಹ ಕಚೇರಿ `ಕೃಷ್ಣಾ~ ಮತ್ತು ವಿಧಾನಸೌಧದ ಕಚೇರಿಯಲ್ಲಿರುವಾಗ ಏನು ಮಾಡುತ್ತಿರುತ್ತಾರೆ, ಯಾರನ್ನು ಭೇಟಿ ಮಾಡುತ್ತಾರೆ, ಯಾರೊಂದಿಗೆ ಮಾತುಕತೆ ನಡೆಸುತ್ತಾರೆ ಎಂಬ ವಿವರಗಳನ್ನು ನೇರವಾಗಿ ವೀಕ್ಷಿಸುವ ಸೌಲಭ್ಯಕ್ಕೆ ಬುಧವಾರ ಚಾಲನೆ ನೀಡಲಾಯಿತು.ನಿರಂತರ ವಿಡಿಯೊ ಸ್ಟ್ರೀಮಿಂಗ್ ಸೌಲಭ್ಯಕ್ಕೆ `ಕೃಷ್ಣಾ~ದಲ್ಲಿ ಚಾಲನೆ ನೀಡಿದ ಸದಾನಂದ ಗೌಡ ಅವರು, `ನಾನು ಗೃಹ ಕಚೇರಿ ಮತ್ತು ವಿಧಾನಸೌಧದ ಕಚೇರಿಯಲ್ಲಿ ಇರುವಾಗ ಏನು ಮಾಡುತ್ತಿರುತ್ತೇನೆ ಎಂಬುದನ್ನು ಸಾರ್ವಜನಿಕರು ನೇರವಾಗಿ ವೀಕ್ಷಿಸಬಹುದು.ಈ ವಿಡಿಯೊ ತುಣುಕುಗಳನ್ನು ದೂರದರ್ಶನ ವಾಹಿನಿಗಳೂ ಪ್ರಸಾರ ಮಾಡಬಹುದು~ ಎಂದು ಹೇಳಿದರು. ಆಡಳಿತದಲ್ಲಿ ಪಾರದರ್ಶಕತೆ ತರುವ ಆಶಯದಿಂದ ಈ ವ್ಯವಸ್ಥೆ ತರಲಾಗಿದೆ.ಇದರ ಸಾಧಕ-ಬಾಧಕಗಳನ್ನು ತಿಳಿದುಕೊಂಡು, ಮುಂದಿನ ದಿನಗಳಲ್ಲಿ ಸಚಿವರ ಕಚೇರಿಗಳಿಗೂ ವಿಸ್ತರಿಸಲಾಗುವುದು. ಇದನ್ನು ಇಂಟರ್‌ನೆಟ್ ಸಂಪರ್ಕವಿರುವ ಮೊಬೈಲ್ ಮೂಲಕವೂ ವೀಕ್ಷಿಸಬಹುದು ಎಂದರು.ಪ್ರಸ್ತುತ `ಕೃಷ್ಣಾ~ ಮತ್ತು ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದೃಶ್ಯಗಳನ್ನು ಮಾತ್ರ ವಿಡಿಯೊ ಸ್ಟ್ರೀಮಿಂಗ್ ಮೂಲಕ ವೀಕ್ಷಿಸಬಹುದು. ಮುಂದಿನ ದಿನಗಳಲ್ಲಿ ಅಲ್ಲಿ ನಡೆಯುವ ಮಾತುಕತೆ ಕೇಳುವ ವ್ಯವಸ್ಥೆ ಬರಲಿದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry