ಇಂಟರ್‌ನೆಟ್ ಬಳಕೆ ಉತ್ತಮ ಬೆಳವಣಿಗೆ

7

ಇಂಟರ್‌ನೆಟ್ ಬಳಕೆ ಉತ್ತಮ ಬೆಳವಣಿಗೆ

Published:
Updated:

ಬೆಂಗಳೂರು: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಇಂಟರ್‌ನೆಟ್ ಬಳಕೆ ಹೆಚ್ಚುತ್ತಿರುವುದು ಸಂತಸದ ಸಂಗತಿ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.ರಾಜ್ಯ ಸರ್ಕಾರವು ಇಂಟೆಲ್ ಸಹಯೋಗದಲ್ಲಿ ಆಯೋಜಿಸಿರುವ ವಿದ್ಯಾರ್ಥಿ ಇಂಟರ್‌ನೆಟ್ ವರ್ಲ್ಡ್ ಕಾರ್ಯಕ್ರಮದ 4ನೇ ಆವೃತ್ತಿಯನ್ನು ಬುಧವಾರ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.ನ್ಯಾಷನಲ್ ಡಿಜಿಟಲ್ ಲಿಟರಸಿ ಮಿಷನ್ ಅಡಿಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್, ಇಂಟರ್‌ನೆಟ್ ಪ್ರಯೋಜನಗಳ ಬಗ್ಗೆ ತಿಳಿವಳಿಕೆ ಮೂಡಿ ಸುವ ಉದ್ದೇಶದ ಈ ಯೋಜನೆ ಕಳೆದ ವರ್ಷ 3.6 ಲಕ್ಷ ವಿದ್ಯಾರ್ಥಿಗಳನ್ನು ತಲು ಪುವಲ್ಲಿ ಯಶಸ್ವಿಯಾಗಿದೆ. ಈ ವರ್ಷ 4 ಲಕ್ಷ ವಿದ್ಯಾರ್ಥಿ ಗಳನ್ನು ತಲುಪಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಇಂಟೆಲ್‌ನ ದಕ್ಷಿಣ ಏಷ್ಯಾ ವಲಯದ ಮಾರ್ಕೆಟಿಂಗ್ ವ್ಯವಸ್ಥಾಪಕ ನಿರ್ದೇಶಕ ಡೆಬ್ಜಾನಿ ಘೋಷ್ ಮಾತನಾಡಿ, ತಂತ್ರಜ್ಞಾನ ಕುರಿತು ಪ್ರತಿಯೊಬ್ಬರಿಗೂ ಅರಿವು ಅಗತ್ಯ. ಅದನ್ನು  ಅರ್ಥ ಪೂರ್ಣ ವಾಗಿ ಬಳಸಿಕೊಳ್ಳಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry