ಇಂಟೆಲ್ ಸ್ಪರ್ಧೆಗೆ ಪುತ್ತೂರಿನ ಬಾಲಕಿ

7

ಇಂಟೆಲ್ ಸ್ಪರ್ಧೆಗೆ ಪುತ್ತೂರಿನ ಬಾಲಕಿ

Published:
Updated:

ಪಿಟ್ಸ್‌ಬರ್ಗ್(ಪಿಟಿಐ): ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇಂಟೆಲ್ ನಡೆಸುತ್ತಿರುವ ಜಾಗತಿಕ ಮಟ್ಟದ ವಿಜ್ಞಾನ ಸಂಶೋಧನಾ ಸ್ಪರ್ಧೆಯ ಅಂತಿಮ ಸುತ್ತಿಗೆ ಪುತ್ತೂರಿನ ವಿದ್ಯಾರ್ಥಿನಿಯೊಬ್ಬರು ಸೇರಿದಂತೆ ಭಾರತದಿಂದ ಏಳು ಮಂದಿ ಆಯ್ಕೆಯಾಗಿದ್ದಾರೆ.ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಈ ಸ್ಪರ್ಧೆ ಆರಂಭವಾಗಿದ್ದು, ಶುಕ್ರವಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸ್ಪರ್ಧೆಗೆ ವಿಶ್ವದಾದ್ಯಂತ 1,549 ಯುವ ವಿಜ್ಞಾನಿಗಳು ಆಯ್ಕೆಯಾಗಿದ್ದು, ಪ್ರಥಮ ಬಹುಮಾನದ ಮೊತ್ತ 75 ಸಾವಿರ ಡಾಲರ್.ಸ್ಪರ್ಧೆಗೆ ಪೂರ್ವಭಾವಿಯಾಗಿ 68 ರಾಷ್ಟ್ರಗಳಲ್ಲಿ ಸುಮಾರು 446 ವಿಜ್ಞಾನ ಮೇಳಗಳನ್ನು ನಡೆಸಲಾಗಿತ್ತು ಎಂದು ಇಂಟೆಲ್ ಪ್ರತಿಷ್ಠಾನದ ಮೂಲಗಳು ತಿಳಿಸಿವೆ. ದಕ್ಷಿಣ ಕನ್ನಡದ ಪುತ್ತೂರಿನಿಂದ ಈ ಸ್ಪರ್ಧೆಗೆ ಆಯ್ಕೆಯಾಗಿರುವ ಸಿಂಧೂರ ಸರಸ್ವತಿ ಬಂಗಾರಡ್ಕ (14) ಕೊಕೊ ಗಿಡಗಳಿಗೆ ತಗುಲುವ `ಹೆಲೊಪೆಲ್ಟಿಸ್ ಅಂಟೊನೈ~ ರೋಗಕ್ಕೆ ಜೈವಿಕ ಕೀಟನಾಶಕ ಸಂಶೋಧಿಸಿದ್ದಳು.ಚೆನ್ನೈನ ರಾಘವೇಂದ್ರ ರಾಮಚಂದ್ರನ್, ಉಜ್ಜಯಿನಿಯ ಗಾರ್ಗಿ ಪಾರೆ, ಕೋಲ್ಕತ್ತದ  ಓಂಕಾರ್ ಸಿಂಗ್ ಗುಜ್ರಾಲ್,  ದೆಹಲಿಯ ಸರಳ್ ಬವೇಜಾ, ನಿಶಿ ಪಾಲಿವಾಲ್ ಹಾಗೂ ಶುಭಂ ಗೋಯಲ್ ಈ ಸ್ಪರ್ಧೆಗೆ ಆಯ್ಕೆಯಾದ ಇತರರು.ಇವರೆಲ್ಲರೂ ರಸಾಯನಶಾಸ್ತ್ರ, ಗಣಿತ, ಭೌತ ವಿಜ್ಞಾನ ಸೇರಿದಂತೆ ಇತರ  ಕ್ಷೇತ್ರಗಳಲ್ಲಿ ವಿನೂತನ ಸಂಶೋಧನೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry