ಇಂಟೆಲ್ ಸ್ಪರ್ಧೆ:ಭಾರತೀಯ ಮಕ್ಕಳ ಮೇಲುಗೈ

7

ಇಂಟೆಲ್ ಸ್ಪರ್ಧೆ:ಭಾರತೀಯ ಮಕ್ಕಳ ಮೇಲುಗೈ

Published:
Updated:

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಪ್ರತಿಷ್ಠಿತ `ಇಂಟೆಲ್ ವಿಜ್ಞಾನ ಪ್ರತಿಭಾ ಶೋಧ~ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಏಳು ವಿದ್ಯಾರ್ಥಿಗಳು ಅಂತಿಮ ಸುತ್ತು ತಲುಪಿದ್ದಾರೆ.ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಇಂಟೆಲ್ ಪ್ರತಿವರ್ಷ ಏರ್ಪಡಿಸುವ ಈ ಸ್ಪರ್ಧೆಯಲ್ಲಿ ಗಣಿತ ಮತ್ತು ವಿಜ್ಞಾನಗಳಲ್ಲಿ ಅಗಾಧ ಬುದ್ಧಿಮತ್ತೆಯ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರಶಸ್ತಿ ನೀಡಲಾಗುತ್ತದೆ. ಈ ಸ್ಪರ್ಧೆಯ ಅಂತಿಮ ಸುತ್ತಿಗೆ ಅಮೆರಿಕದ ವಿವಿಧ ರಾಜ್ಯಗಳ 40 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅವರಲ್ಲಿ ಭಾರತೀಯ ಮೂಲದ ಸೌರಭ್ ಶರಣ್, ಸಯೋನಿ ಸಹಾ, ಸಿದ್ಧಾರ್ಥ ಗೌತಮ ಜೆನಾ, ನಿತಿನ್ ರೆಡ್ಡಿ ತುಮ್ಮಾ, ನೀಲ್ ಎಸ್. ಪಟೇಲ್, ಅನಿರುದ್ಧ ಪ್ರಭು ಹಾಗೂ ನೀಲ್ ಕಮಲೇಶ್ ಸಹ ಸೇರಿದ್ದಾರೆ.ಅಂತಿಮ ಸ್ಪರ್ಧೆ ಮಾರ್ಚ್‌ನಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry