ಇಂಡಿಗೋ ಏರ್‌ವೇಸ್‌ ವಿಮಾನ ಚಕ್ರ ಸ್ಫೋಟ

7

ಇಂಡಿಗೋ ಏರ್‌ವೇಸ್‌ ವಿಮಾನ ಚಕ್ರ ಸ್ಫೋಟ

Published:
Updated:
ಇಂಡಿಗೋ ಏರ್‌ವೇಸ್‌ ವಿಮಾನ ಚಕ್ರ ಸ್ಫೋಟ

ಬೆಂಗಳೂರು: ಬೆಂಗಳೂರು ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್‌) ಗುರುವಾರ ರಾತ್ರಿ ಇಂಡಿಗೊ ಏರ್‌ವೇಸ್‌ ಸಂಸ್ಥೆಯ ವಿಮಾನವೊಂದು ಕೆಳಗಿಳಿಯುವಾಗ ಅದರ ಚಕ್ರ ರನ್‌ವೇಯ ದಾರಿಸೂಚಕ ದೀಪಕ್ಕೆ (ಎಡ್ಜ್‌ ಲೈಟ್‌) ತಾಗಿ ಸ್ಫೋಟ ಗೊಂಡಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ವಾಗಿತ್ತು.ಸಂಜೆ ದೆಹಲಿಯಿಂದ ಹೊರಟಿದ್ದ  ವಿಮಾನ (ಇಂಡಿಗೊ ಏರ್‌ವೇಸ್‌ 6 x 125)  ರಾತ್ರಿ 8.45ರ ಸುಮಾರಿಗೆ ಬಿಐಎಎಲ್‌ನಲ್ಲಿ ಕೆಳಗಿಳಿಯುವಾಗ ಮಳೆ ಸುರಿಯುತ್ತಿದ್ದರಿಂದ ಈ ಅವಘಡ ಸಂಭವಿಸಿದೆ.‘ಘಟನೆಯಲ್ಲಿ ಯಾರಿಗೂ ಗಾಯ ವಾಗಿಲ್ಲ. ಸುಮಾರು ಮೂರು  ತಾಸುಗಳ ಕಾಲ ಇತರ ವಿಮಾನಗಳ ಆಗಮನ ಹಾಗೂ ನಿಗರ್ಮನದಲ್ಲಿ ವ್ಯತ್ಯಯ ವಾಯಿತು. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸು ವಂತಾಯಿತು’  ಎಂದು ಈಶಾನ್ಯ ವಿಭಾಗದ ಡಿಸಿಪಿ ಸುರೇಶ್‌ ಅವರು  ‘ಪ್ರಜಾವಾಣಿ’ಗೆ ತಿಳಿಸಿದರು.ಮಳೆಯಿಂದಾಗಿ ಪೈಲಟ್‌ಗೆ ಸ್ಪಷ್ಟವಾಗಿ ರನ್‌ ವೇ ಗೋಚರಿಸದೇ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.ಪ್ರಯಾಣಿಕರ ಪರದಾಟ: ಘಟನೆ

ನಡೆದ ತಕ್ಷಣ ಅಧಿಕಾರಿಗಳು ಸರಿಯಾದ ಮಾಹಿತಿ ಕೊಡದ ಕಾರಣ ಸುಮಾರು ನಾಲ್ಕು ತಾಸು ಪರದಾಡಬೇಕಾಯಿತು ಎಂದು ಪ್ರಯಾಣಿಕರಾದ ಜಯಚಂದ್‌, ಸ್ಟುವರ್ಟ್ ಮತ್ತಿತರರು ದೂರಿದ್ದಾರೆ. ಈ ವಿಮಾನದಲ್ಲಿ ಸುಮಾರು 110 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry