ಮಂಗಳವಾರ, ನವೆಂಬರ್ 12, 2019
28 °C

ಇಂಡಿಯನ್ ಪ್ರೀಮಿಯರ್ ಲೀಗ್: ಮನರಂಜನಾ ತೆರಿಗೆ ರದ್ದು

Published:
Updated:

ರಾಯ್‌ಪುರ (ಪಿಟಿಐ): ತಮ್ಮ ರಾಜ್ಯದಲ್ಲಿ ಕ್ರಿಕೆಟ್‌ಗೆ ಇನ್ನಷ್ಟು ಖ್ಯಾತಿ ಲಭಿಸಬೇಕು ಎನ್ನುವ ಉದ್ದೇಶ ಹೊಂದಿರುವ ಛತ್ತೀಸಗಡ ಸರ್ಕಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿಕೆಟ್‌ಗಳಿಗೆ ಮನರಂಜನಾ ತೆರಿಗೆಯನ್ನು ರದ್ದು ಮಾಡಿದೆ.`ಐಪಿಎಲ್ ಪಂದ್ಯಗಳ ಟಿಕೆಟ್ ಮೇಲಿನ ಮನರಂಜನಾ ತೆರಿಗೆಯನ್ನು ರದ್ದು ಮಾಡಲು ನಿರ್ಧರಿಸಲಾಗಿದೆ. ಮಂಗಳವಾರ ಸಂಜೆ ಸೇರಿದ್ದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ರಮಣ್ ಸಿಂಗ್ ಈ ತೀರ್ಮಾನ ಕೈಗೊಂಡಿದ್ದಾರೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಏಪ್ರಿಲ್ 28ರಂದು ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ಪುಣೆ ವಾರಿಯರ್ಸ್ ತಂಡಗಳ ನಡುವೆ ಇಲ್ಲಿ ಮೊದಲ ಪಂದ್ಯ ನಡೆಯಲಿದೆ. ಶಾಹಿದ್ ವೀರ್ ನಾರಾಯಣ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

ಪ್ರತಿಕ್ರಿಯಿಸಿ (+)