ಇಂಡಿಯಾಕ್ಯಾನ್ ಕೇಂದ್ರ ಆರಂಭ

7

ಇಂಡಿಯಾಕ್ಯಾನ್ ಕೇಂದ್ರ ಆರಂಭ

Published:
Updated:

ಇಂಡಿಯಾಕ್ಯಾನ್ ನಗರದಲ್ಲಿ ತನ್ನ ತೃತೀಯ ವೃತ್ತಿ ತರಬೇತಿ ಕೇಂದ್ರವನ್ನು ಆರಂಭಿಸಿದೆ.

ಇಂಡಿಯಾಕ್ಯಾನ್ ಉದ್ಯೋಗ ಕೌಶಲಗಳ ತರಬೇತಿ ನೀಡುವ ಸಂಸ್ಥೆ. ಯುವಜನರಿಗೆ ಉದ್ಯೋಗಾರ್ಹತೆಗೆ ತಕ್ಕಂತೆ ಕೌಶಲಗಳನ್ನು ಒದಗಿಸುವುದು ಇದರ ಉದ್ದೇಶ. ಇಂಡಿಯಾಕ್ಯಾನ್ ಶಿಕ್ಷಣ ಸಂಸ್ಥೆಯಾದ ಎಜುಕ್ಯಾಂಪ್ ಸಲ್ಯೂಷನ್ಸ್ ಲಿಮಿಟೆಡ್‌ನ ಒಂದು ಸಹಯೋಗಿ ಸಂಸ್ಥೆ. ಇದು ಪಿಯರ್ಸನ್ ಜೊತೆಗೂಡಿ ನಗರದಲ್ಲಿ ಮೂರನೆಯ ವೃತ್ತಿ ತರಬೇತಿ ಕೇಂದ್ರ ಆರಂಭಿಸಿದೆ.  ಈ ಕೇಂದ್ರದಲ್ಲಿ ಸಂವಹನ, ಲೆಕ್ಕ, ಮಾರಾಟ, ಚಿಲ್ಲರೆ ಮತ್ತು ಐಟಿ ಹಾಗೂ ಮೂಲಭೂತ ಸೌಲಭ್ಯ ನಿರ್ವಹಣಾ ವಿಷಯಗಳ ಬಗ್ಗೆ ಗಮನ ಹರಿಸಲಾಗುತ್ತದೆ.

ಸಂಸ್ಥೆ ಆರಂಭದ ದಿನ `ಹಣಕಾಸು ಮತ್ತು ಐಟಿ ಮೂಲಭೂತ ಸೌಲಭ್ಯಗಳ ನಿರ್ವಹಣೆಯಲ್ಲಿ ಕರ್ನಾಟಕ ಯುವಜನತೆಯಲ್ಲಿ ಕೌಶಲ್ಯ ಅಭಿವೃದ್ಧಿಯ ಅಗತ್ಯತೆ~ ಎಂಬ ವಿಷಯ ಕುರಿತು ವಿಚಾರ ಸಂಕಿರಣ ಆಯೋಜಿಸಿತ್ತು. ನಗರದ ಅನೇಕ ಕಾಲೇಜುಗಳ ಮತ್ತು ಶಾಲೆಗಳ ಮುಖ್ಯಸ್ಥರು ಭಾಗವಹಿಸಿದ್ದರು. `ವಿಜಯನಗರ ಮತ್ತು ಬನಶಂಕರಿ ಕೇಂದ್ರಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆ ನಂತರ ಕಲ್ಯಾಣನಗರದಲ್ಲಿ ಮೂರನೆಯ ಕೇಂದ್ರವನ್ನು ಪ್ರಾರಂಭಿಸಲು ಸಂತಸವಾಗುತ್ತಿದೆ. ನಗರದ ಯುವ ಜನರಿಗೆ ಹಣಕಾಸು, ಐಟಿಇಎಸ್, ಐಎಮ್‌ಎಸ್, ಆರೋಗ್ಯರಕ್ಷಣೆ ಮತ್ತು ಮಾಧ್ಯಮ ಇತ್ಯಾದಿ ಕ್ಷೇತ್ರಗಳ ಉದ್ಯೋಗಗಳಿಗೆ ಬೇಕಿರುವ ಕೌಶಲಗಳ ತರಬೇತಿ ಅಗತ್ಯ ಮತ್ತು ಬೇಡಿಕೆಗಳು ಹೆಚ್ಚಿರುವುದನ್ನು ಇದು ತೋರುತ್ತದೆ~ ಎನ್ನುತ್ತಾರೆ ಇಂಡಿಯಾಕ್ಯಾನ್ ರಾಷ್ಟ್ರೀಯ ಮಾರಾಟ ವಿಭಾಗದ ಉಪಾಧ್ಯಕ್ಷ ಸಂಜಯ್ ಮಜುಂದಾರ್.

ಸ್ಥಳ: 202, 7ನೆಯ ಮುಖ್ಯ ರಸ್ತೆ, ಎಚ್‌ಆರ್‌ಬಿಆರ್ ಬಡಾವಣೆ, 1 ನೆಯ ಬ್ಲಾಕ್, ಕಲ್ಯಾಣ ನಗರ.

ಹೆಚ್ಚಿನ ಮಾಹಿತಿಗೆ: 9886195494, 8147111098

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry