ಇಂಡಿಯಾ ಫುಡೆಕ್ಸ್ ಆ. 23ರಿಂದ
ಬೆಂಗಳೂರು: ಕೃಷಿ ಯಂತ್ರೋಪಕರಣ, ಧಾನ್ಯ ಸಂಸ್ಕರಣೆ ಮತ್ತು ಚಿಲ್ಲರೆ ವಹಿವಾಟಿಗೆ ಸಂಬಂಧಿಸಿ ನಗರದಲ್ಲಿ ಆ. 23ರಿಂದ `ಇಂಡಿಯಾ ಫುಡೆಕ್ಸ್- 2013' ಆಹಾರ ವಸ್ತು ಪ್ರದರ್ಶನ ನಡೆಯಲಿದೆ ಎಂದು ಮೀಡಿಯಾ ಟುಡೆ ಸಮೂಹದ ಮುಖ್ಯ ಸಂಯೋಜಕ ಜಾಫರ್ ನಕ್ವಿ ಹೇಳಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 3 ದಿನಗಳ ಕಾಲ ಹೈನುಗಾರಿಕೆ, ಕೋಳಿ ಸಾಕಣೆ, ಜಾನುವಾರು ಪ್ರದರ್ಶನವೂ ನಡೆಯಲಿದೆ. ನೆದರ್ಲೆಂಡ್ನ 25 ಕಂಪೆನಿ, ಟರ್ಕಿಯ 23, ಇಟಲಿಯ 11 ಕಂಪೆನಿ ಹಾಗೂ ಜರ್ಮನಿ, ಫ್ರಾನ್ಸ್, ಬೆಲ್ಜಿಯಂ, ಕೆನಡಾ ಸೇರಿದಂತೆ ದೇಶ-ವಿದೇಶದ 250 ಪ್ರದರ್ಶಕರು ಪಾಲ್ಗೊಳ್ಳುವರು. 15 ರಾಜ್ಯಗಳ ರೈತರ ನಿಯೋಗ ಆಗಮಿಸಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.