ಶುಕ್ರವಾರ, ಅಕ್ಟೋಬರ್ 18, 2019
28 °C

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್

Published:
Updated:

ಈ ಬಾರಿಯ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಬೆಂಗಳೂರಿನ ರಿಗ್ರೆಟ್ ಅಯ್ಯರ್ ಅವರ ಕೈಬರಹದ ಸಂಚಿಕೆಗಳು ದಾಖಲೆಗೆ ಆಯ್ಕೆಯಾಗಿದ್ದು, 2012ರ 120 ಪ್ರಮುಖ ದಾಖಲೆಗಳ ಪೈಕಿ ಇವರದ್ದೂ ಒಂದು.ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಡೇ ಕಾರ್ಯಕ್ರಮ ಭಾರತದ 12 ಕಡೆಗಳಲ್ಲಿ ನಡೆಯಲಿದ್ದು, ಈ ರೆಕಾರ್ಡ್ಸ್‌ನ 2012 ಆಯಾಮ ಎರಡು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ರಿಗ್ರೆಟ್ ಅಯ್ಯರ್ ತಮ್ಮ 19 ನೇ ವಯಸ್ಸಿನಿಂದ ಬರೆದ ಸಂಚಿಕೆಗಳು ಆಯ್ಕೆಯಾಗಿವೆ. 1969ರಿಂದ 1978ರ ಅವಧಿಯಲ್ಲಿ ಇವರು ಪಾಸ್ ಬುಕ್ ಆಕಾರದ 8 ಪುಟಗಳ ಕನ್ನಡ ಪತ್ರಿಕೆಗಳ್ನು ಬರೆದಿದ್ದರು.  ಹೀಗೆ ಒಟ್ಟು 98 ಸಂಚಿಕೆಗಳನ್ನು ಕೈಯಿಂದ ಬರೆದುದು ಈಗ ದಾಖಲೆಯಾಗಿದೆ.ಇದೇ ಜ.12ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ರಿಗ್ರೆಟ್ ಅಯ್ಯರ್ ಅವರಿಗೆ ನಗರದ ರಿಲಾಯನ್ಸ್ ಟೈಮ್ ಔಟ್, ಪ್ರೆಸ್ಟೀಜ್ ಫಿರೋಜ್ ಬಿಲ್ಡಿಂಗ್, ನಂ 74, ಕನ್ನಿಂಗ್ ಹ್ಯಾಂ ರೋಡ್‌ನಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ.ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಕಾರ್ಯಕ್ರಮವನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಡೈಮಂಡ್ ಪಾಕೆಟ್ ಬುಕ್ಸ್ ಮತ್ತು ರಿಲಾಯನ್ಸ್ ಟೈಮ್ ಔಟ್ ಸಹಯೋಗದೊಂದಿಗೆ ಆಯೋಜಿಸಿದೆ.

Post Comments (+)