ಗುರುವಾರ , ಮಾರ್ಚ್ 4, 2021
29 °C

ಇಂಡೋ–ಪಾಕ್‌ ಗಡಿಯಲ್ಲಿ ಲೇಸರ್ ವಾಲ್ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡೋ–ಪಾಕ್‌ ಗಡಿಯಲ್ಲಿ ಲೇಸರ್ ವಾಲ್ ನಿರ್ಮಾಣ

ನವದೆಹಲಿ (ಪಿಟಿಐ): ಇಂಡೋ–ಪಾಕ್‌ ಗಡಿಯಲ್ಲಿ ಲೇಸರ್‌ ವಾಲ್‌ (ಗೋಡೆ) ನಿರ್ಮಾಣಕ್ಕೆ ಕೇಂದ್ರ ಗೃಹ ಇಲಾಖೆ ಮುಂದಾಗಿದೆ.ಪಠಾಣ್ ಕೋಟ್ ದಾಳಿಯ ಬಳಿಕ  ಭಾರತ ಮತ್ತು ಪಾಕಿಸ್ತಾನ ನಡುವಿನ  ಅಂತರರಾಷ್ಟ್ರೀಯ ಗಡಿ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಲು ಕೇಂದ್ರ ಸರ್ಕಾರ ಲೇಸರ್‌ ವಾಲ್‌ ನಿರ್ಮಾಣ ಮಾಡುತ್ತಿದೆ.40 ಕ್ಕೂ ಹೆಚ್ಚು ಅತಿ ಸೂಕ್ಷ್ಮ ಗಡಿ ಪ್ರದೇಶಗಳಲ್ಲಿ ಲೇಸರ್ ವಾಲ್ ನಿರ್ಮಾಣ ಮಾಡಲಾಗುವುದು ಎಂದು ಗೃಹ ಇಲಾಖೆ ತಿಳಿಸಿದೆ. ಬಿಎಸ್ಎಫ್ ಲೇಸರ್ ವಾಲ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಗಡಿಯಲ್ಲಿ ಯಾವುದೇ ವ್ಯಕ್ತಿ ಭಾರತಕ್ಕೆ ನುಸುಳುವುದನ್ನು ಸಮರ್ಥವಾಗಿ ಪತ್ತೆ ಹಚ್ಚಬಹುದು ಎನ್ನಲಾಗಿದೆ.ಲೇಸರ್‌ ವಾಲ್‌ನಲ್ಲಿ ಅಳವಡಿಸಿರುವ ಡಿಟೆಕ್ಟರ್‌ ಗಡಿಯಲ್ಲಿ ಯಾವುದೇ ವ್ಯಕ್ತಿ ನುಸುಳಿದ ಕೂಡಲೇ ಸೈರನ್‌ ಕೂಗುತ್ತದೆ. ಲೇಸರ್‌ ವಾಲ್‌ ಅಳವಡಿಕೆಯಿಂದ ಉಗ್ರರು ನುಸುಳುವುದನ್ನು ಸಮರ್ಥವಾಗಿ ತಡೆಯಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.