ಗುರುವಾರ , ಜೂನ್ 4, 2020
27 °C

ಇಂದಿನಿಂದ ಎನ್‌ಕೆಪಿ ಸಾಳ್ವೆ ಚಾಲೆಂಜರ್ಸ್ ಟ್ರೋಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿನಿಂದ ಎನ್‌ಕೆಪಿ ಸಾಳ್ವೆ ಚಾಲೆಂಜರ್ಸ್ ಟ್ರೋಫಿ

ನಾಗಪುರ (ಪಿಟಿಐ): ತಂಡದಿಂದ ಹೊರಗುಳಿದಿರುವ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಸೇರಿದಂತೆ ಇತರ ಕೆಲ ಪ್ರಮುಖ ಆಟಗಾರರಿಗೆ ತಮ್ಮ `ಶಕ್ತಿ~ ಪ್ರದರ್ಶಿಸಲು ಸೋಮವಾರ ಆರಂಭವಾಗಲಿರುವ ಎನ್‌ಕೆಪಿ ಸಾಳ್ವೆ ಚಾಂಲೆಂಜರ್ಸ್ ಟ್ರೋಫಿ  ಕ್ರಿಕೆಟ್ ಟೂರ್ನಿ ನೆರವಾಗಲಿದೆ.ಮೊದಲ ಪಂದ್ಯದಲ್ಲಿ ಇಂಡಿಯಾ ಬ್ಲೂ ಹಾಗೂ ಇಂಡಿಯಾ ರೆಡ್ ತಂಡಗಳು ಸೆಣಸಲಿವೆ. ಅಮಿತ್ ಮಿಶ್ರಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಎಸ್. ಬದರೀನಾಥ್, ಮುರಳಿ ವಿಜಯ್, ಸೌರಭ್ ತಿವಾರಿ, ಕರ್ನಾಟಕದ ಅಭಿಮನ್ಯು ಮಿಥುನ್ ಹಾಗೂ ಪ್ರಗ್ಯಾನ್ ಓಜಾ ಅವರು ರಾಷ್ಟ್ರೀಯ ತಂಡದ ಆಯ್ಕೆದಾರರ ಗಮನ ಸೆಳೆಯಲು ಉತ್ತಮ ಅವಕಾಶ ಲಭಿಸಿದೆ.ಬ್ಲೂ ತಂಡದ ನಾಯಕ ಎಸ್. ಬದರೀನಾಥ್ ಹಾಗೂ ರೆಡ್ ತಂಡದ ನಾಯಕ ಗೌತಮ್ ಗಂಭೀರ್ ಅವರಿಗೆ ಮೊದಲ ಪಂದ್ಯದಲ್ಲಿಯೇ ಉತ್ತಮ ಮುನ್ನುಡಿ ಬರೆಯಬೇಕು ಎನ್ನುವ ತವಕ. ಈ ಪಂದ್ಯ ಇಲ್ಲಿನ ಜಾಮ್ತಾ ಕ್ರೀಡಾಂಗಣದಲ್ಲಿ ನಡೆಯಲಿದೆ.ಇಂದಿನ ಪಂದ್ಯದಲ್ಲಿ ಸ್ಪಿನ್ನರ್‌ಗಳ ನಡುವೆ ಉತ್ತಮ ಪೈಪೋಟಿ ಕಂಡು ಬರುವ ನಿರೀಕ್ಷೆಯಿದೆ. ಪ್ರಗ್ಯಾನ್ (ಇಂಡಿಯಾ ರೆಡ್) ಹಾಗೂ ಪಿಯೂಷ್ ಚಾವ್ಲಾ (ಇಂಡಿಯಾ ಬ್ಲೂ) ಎರಡೂ ತಂಡಗಳಲ್ಲಿಯು ಉತ್ತಮ ಸ್ಪಿನ್ನರ್‌ಗಳಿದ್ದಾರೆ.ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಿಗೆ ಭಜ್ಜಿ ಆಯ್ಕೆಯಾಗಿಲ್ಲ. ಇಂಡಿಯಾ ಗ್ರೀನ್ ತಂಡದ ನಾಯಕ ಭಜ್ಜಿ ಇಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಮರಳುವ ಆಸೆ ಹೊಂದಿದ್ದಾರೆ.

ಆರಂಭ: ಮಧ್ಯಾಹ್ನ 2.30 ಗಂಟೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.