ಇಂದಿನಿಂದ ಕರಗದಮ್ಮ ಕುಂಭಾಭಿಷೇಕ ಕಾರ್ಯಕ್ರಮ

7

ಇಂದಿನಿಂದ ಕರಗದಮ್ಮ ಕುಂಭಾಭಿಷೇಕ ಕಾರ್ಯಕ್ರಮ

Published:
Updated:

ವಿಜಯಪುರ: ಸಮೀಪದ ಚನ್ನರಾಯಪಟ್ಟಣ ಗ್ರಾಮದಲ್ಲಿ ನಿರ್ಮಿಸಿರುವ ಕರಗದಮ್ಮ ದೇವಾಲಯದಲ್ಲಿ ಶುಕ್ರವಾರದಿಂದ 13 ರವರೆಗೆ ಶಿಲಾಬಿಂಬ ಪ್ರತಿಷ್ಠಾಪನೆ, ವಿಮಾನಗೋಪುರ ಕಳಸ ಸ್ಥಾಪನೆ, ನೂತನ ಉತ್ಸವಮೂರ್ತಿ ಚರಪ್ರತಿಷ್ಠಾ ಮತ್ತು ಮಹಾಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಆಲಪನಹಳ್ಳಿ ಕೆ.ಕೃಷ್ಣಪ್ಪ ತಿಳಿಸಿದ್ದಾರೆ.11 ರಂದು ಗಣಪತಿಪೂಜೆ, ಗ್ರಾಮಪ್ರದಕ್ಷಿಣೆಯೊಂದಿಗೆ ಗಂಗಾಪೂಜೆ, ವಾಸ್ತುಪೂಜೆ, ರಕ್ಷಾಬಂಧನ ಕಾರ್ಯಕ್ರಮಗಳು, 12 ರಂದು ವೇದಪಾರಾಯಣ, ಕಳಸಸ್ಥಾಪನೆ, ವಿಮಾನಗೋಪುರ ಕಳಸಸ್ಥಾಪನೆ, ಆಧಾರ ಶಕ್ತಿಗಳೊಂದಿಗೆ ನವರತ್ನ, ಪಂಚಲೋಹ ಚಕ್ರಸ್ಥಾಪನೆ, 13 ರಂದು  ಬೆಳಿಗ್ಗೆ ನಾಡಿಸಂಧಾನಪೂರ್ವಕ ಸ್ಪರ್ಶಾಹುತಿ, ತತ್ವಾರ್ಚನೆ, ಮಹಾಕುಂಭಾಭಿಷೇಕ, ಅಷ್ಟಾವಧಾನ ಸೇವೆ,  ಕಾರ್ಯಕ್ರಮಗಳು ನಡೆಯಲಿವೆ.13 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಉದ್ಘಾಟನೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಸಚಿವ ಬಿ.ಎನ್.ಬಚ್ಚೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಕೆ.ವೆಂಕಟಸ್ವಾಮಿ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕ ಜಿ.ಚಂದ್ರಣ್ಣ, ಡಿ.ಎಸ್.ಗೌಡ, ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷೆ ಜಯಕುಮಾರಿ ಸೊಣ್ಣಪ್ಪ, ಬಿ.ರಾಜಣ್ಣ, ಬಿ.ಮುನೇಗೌಡ,  ಒಕ್ಕಲಿಗರ ಸಂಘದ ನಿರ್ದೇಶಕ ಗೋಪಾಲಗೌಡ ಮತ್ತಿತರರು ಭಾಗವಹಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry