ಬುಧವಾರ, ನವೆಂಬರ್ 13, 2019
22 °C

ಇಂದಿನಿಂದ ಕೇರಳ ಕೈಮಗ್ಗ ಉತ್ಪನ್ನ ಪ್ರದರ್ಶನ

Published:
Updated:

ಬೆಂಗಳೂರು: `ಕೇರಳ ಕೈಮಗ್ಗ ಮತ್ತು ಟೆಕ್ಸ್‌ಟೈಲ್ ಉತ್ಪನ್ನಗಳ ನಿರ್ದೇಶನಾಲಯ ಮತ್ತು ಕಣ್ಣೂರಿನ ಭಾರತೀಯ ಕೈಮಗ್ಗ ಉತ್ಪನ್ನಗಳ ತಾಂತ್ರಿಕ ಸಂಸ್ಥೆಗಳ ವತಿಯಿಂದ ಇದೇ ಶುಕ್ರವಾರದಿಂದ ಮೂರು ದಿನಗಳ ಕಾಲ (ಏ. 26- 28) ಕೇರಳ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ' ಎಂದು ಕೇರಳ ಕೈಮಗ್ಗ ಮತ್ತು ಟೆಕ್ಸ್‌ಟೈಲ್ ನಿರ್ದೇಶನಾಲಯದ ನಿರ್ದೇಶಕ ಸಾಮ್ ಇತ್ತಿಚೇರಿಯಾ ಹೇಳಿದರು.ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇರಳ ಕೈಮಗ್ಗ ಉತ್ಪನ್ನಗಳು ಆಕರ್ಷಕ ವಿನ್ಯಾಸ, ಬಣ್ಣಗಳಿಂದಾಗಿ ಜನಪ್ರಿಯವಾಗಿವೆ. ಕೇರಳದ ವಿವಿಧ ಭಾಗಗಳ 20ಕ್ಕೂ ಅಧಿಕ ಕೈಮಗ್ಗ ಘಟಕಗಳು ಮೇಳದಲ್ಲಿ ಭಾಗವಹಿಸಲಿವೆ. ನಗರದ ಸೌತ್ ಎಂಡ್ ವೃತ್ತದಲ್ಲಿರುವ ಹೋಟೆಲ್ ಲಾ-ಮಾರ್ವೆಲ್ಲಾದಲ್ಲಿ ಮೇಳವನ್ನು ಆಯೋಜಿಸಲಾಗಿದೆ ಎಂದರು.ಉತ್ಕೃಷ್ಟ ಗುಣಮಟ್ಟದ ರೇಷ್ಮೆ ಸೀರೆಗಳು, ದೋತಿ, ಶರ್ಟ್ ಬಟ್ಟೆ, ಚೂಡಿದಾರ ಬಟ್ಟೆ, ಕರ್ಟನ್ಸ್, ಮ್ಯಾಟ್‌ಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಬೆಳಿಗ್ಗೆ ಹತ್ತರಿಂದ ಸಂಜೆ ಏಳು ಗಂಟೆಯವರೆಗೆ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)