ಇಂದಿನಿಂದ ಗಣಿತ ಉತ್ಸವ

7

ಇಂದಿನಿಂದ ಗಣಿತ ಉತ್ಸವ

Published:
Updated:

ಬೆಂಗಳೂರು:`ಬ್ರೇನ್ ಸ್ಟಾರ್ಸ್ ಸಂಸ್ಥೆಯು (ಡಿ.22) ಶನಿವಾರ “ನಂಬರ್ ನಗರ್‌”ನ ಉದ್ಘಾಟನೆಯ ಅಂಗವಾಗಿ ಮಕ್ಕಳಿಗಾಗಿ ಸ್ವಾತಂತ್ರ್ಯ ಉದ್ಯಾನವನದಲ್ಲಿ `ಗಲಾಟಾ 221212 ಮ್ಯಾತ್ಸ್ ಆಡಿ, ಮಾತ್ ಆಡಿ' ಎನ್ನುವ ನಾಲ್ಕು ದಿನಗಳ ಗಣಿತ ಉತ್ಸವವನ್ನು ಆಯೋಜಿಸಿದೆ' ಎಂದು ಕಮ್ಯೂನಿಕೇಷನ್ ಅಂಡ್ ರಿಲೇಷನ್‌ಶಿಫ್ ಅಧ್ಯಕ್ಷೆ ಅನುಪಮ ಪ್ರಕಾಶ್ ತಿಳಿಸಿದರು.ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಭಾರತ ಗಣಿತಜ್ಞ ಶ್ರೀನಿವಾಸ ರಾಮಾನುಜಮ್ ಅವರ ಸ್ಮರಣಾರ್ಥ ಗಣಿತ ದಿನವನ್ನು ಆಚರಿಸಲು ಗಣಿತೋತ್ಸವವನ್ನು ಆಯೋಜಿಸಿದ್ದು, ಉತ್ಸವದ ಪ್ರತಿ ದಿನ ನಿತ್ಯ ಜೀವನದಲ್ಲಿ ಕಾಣಿಸುವ ಗಣಿತದ ಅಂಶಗಳ ಪರಿಶೋಧನೆ ಹಾಗೂ ಅನ್ವೇಷಣೆ ಮತ್ತು ವಸ್ತುಗಳ ತಯಾರಿಕೆ ನಡೆಯುತ್ತದೆ.ಪಾಲ್ಗೊಂಡಿರುವರು ತಯಾರಿಸಿದ ಹಾಗೂ ಸಂಗ್ರಹಿಸಿದ ವಸ್ತುಗಳ ಪ್ರದರ್ಶನ ಮಾಡಲಾಗುವುದು. ಇದಲ್ಲದೇ ಸಂಸ್ಥೆಯ ತಜ್ಞರೊಂದಿಗೆ ಸಂದರ್ಶನ ನಡೆಯಲಿದೆ'.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry