ಇಂದಿನಿಂದ ಚಾಂಪಿಯನ್ಸ್ ಲೀಗ್;ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಬಳಿಕ ಮತ್ತೆ ಹರಿಯಲಿದೆ ಸಿಕ್ಸರ್ ಸುರಿಮಳೆ

7

ಇಂದಿನಿಂದ ಚಾಂಪಿಯನ್ಸ್ ಲೀಗ್;ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಬಳಿಕ ಮತ್ತೆ ಹರಿಯಲಿದೆ ಸಿಕ್ಸರ್ ಸುರಿಮಳೆ

Published:
Updated:

ಜೋಹಾನ್ಸ್‌ಬರ್ಗ್ (ಪಿಟಿಐ): 20 ದಿನಗಳ ಚುಟುಕು ವಿಶ್ವಕಪ್ ಉತ್ಸವ ಮುಗಿಯುತ್ತಿದ್ದಂತೆ ಮತ್ತೊಂದು ಕ್ರಿಕೆಟ್ ಹಬ್ಬಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಅದು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿ. ಈ ಟೂರ್ನಿ ಅಕ್ಟೋಬರ್ 9ರಿಂದ 28ರವರೆಗೆ ನಡೆಯಲಿದೆ. ಮೊದಲ ಮೂರು ದಿನ ಅರ್ಹತಾ ಹಂತದ ಪಂದ್ಯಗಳು ನಡೆಯಲಿವೆ. ಅ.13ರಿಂದ ಪ್ರಧಾನ ಹಂತದ ಪಂದ್ಯಗಳು ನಡೆಯಲಿವೆ. 28ರಂದು ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದೆ.ಈ ಟೂರ್ನಿಯಲ್ಲಿ ಆಯಾ ದೇಶಗಳ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಚಾಂಪಿಯನ್ ಆದ ತಂಡಗಳು ಪಾಲ್ಗೊಳ್ಳಲಿವೆ. ಭಾರತದಿಂದ ಐಪಿಎಲ್ ತಂಡಗಳಾದ ಕೋಲ್ಕತ್ತ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಮುಂಬೈ   ಇಂಡಿಯನ್ಸ್ ಪಾಲ್ಗೊಳ್ಳಲಿವೆ. ಹಾಗೇ, ಆಸ್ಟ್ರೇಲಿಯಾ, ಪಾಕಿಸ್ತಾನ,              ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್‌ನಿಂದಲೂ ತಂಡಗಳು ಆಗಮಿಸಲಿವೆ.ಅರ್ಹತಾ ಹಂತದಲ್ಲಿ ಆರು ತಂಡಗಳು ಮೂರು ದಿನ ಪೈಪೋಟಿ ನಡೆಸಲಿವೆ. ಇದರಲ್ಲಿ ಗೆಲ್ಲುವ ಎರಡು ತಂಡಗಳು ಪ್ರಧಾನ ಹಂತದಲ್ಲಿ ಆಡಲು ಅರ್ಹತಾ ಪಡೆಯಲಿವೆ. ಹಲವು ವರ್ಷಗಳ ಬಳಿಕ ಪಾಕಿಸ್ತಾನದ ತಂಡವೊಂದಕ್ಕೆ ಅವಕಾಶ ನೀಡಲಾಗಿದೆ.ಈ ದೇಶದ ಸಿಯಾಲ್‌ಕೋಟ್ ಸ್ಟಾಲಿಯನ್ಸ್ ತಂಡ ಅರ್ಹತಾ ಹಂತದಲ್ಲಿ ಆಡಲಿದೆ. ಮಂಗಳವಾರ ಶ್ರೀಲಂಕಾದ ಉವಾ ನೆಕ್ಟ್ಸ್ ಹಾಗೂ ಇಂಗ್ಲೆಂಡ್‌ನ ಯಾರ್ಕ್‌ಶೈರ್ ಮುಖಾಮುಖಿಯಾಗಲಿವೆ. ಮತ್ತೊಂದು ಪಂದ್ಯದಲ್ಲಿ ಆಕ್ಲೆಂಡ್ ಏಸಸ್ ಹಾಗೂ ಸಿಯಾಲ್‌ಕೋಟ್ ಪೈಪೋಟಿ ನಡೆಸಲಿವೆ.ಹೋದ ವರ್ಷ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು. ಅದಕ್ಕೂ ಮೊದಲ ಮಹೇಂದ್ರ ಸಿಂಗ್ ದೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿತ್ತು. ಪ್ರಧಾನ ಹಂತದ ಮೊದಲ ಪಂದ್ಯದಲ್ಲಿ ಗೌತಮ್ ಗಂಭೀರ್ ಸಾರಥ್ಯದ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ಹಣಾಹಣಿಯಾಗಲಿವೆ. ಡೇರ್‌ಡೆವಿಲ್ಸ್ ತಂಡವನ್ನು ಶ್ರೀಲಂಕಾದ ಮಾಹೇಲ ಜಯವರ್ಧನೆ ಮುನ್ನಡೆಸಲಿದ್ದಾರೆ. ಗಾಯಗೊಂಡಿರುವ ಈ ತಂಡದ ವೀರೇಂದ್ರ ಸೆಹ್ವಾಗ್ ಕೆಲ ಪಂದ್ಯಗಳಿಗೆ ಲಭ್ಯರಿರುವುದಿಲ್ಲ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry