ಇಂದಿನಿಂದ ಜೆಡಿಎಸ್ ಯುವ ಚೇತನ ಯಾತ್ರೆ

7

ಇಂದಿನಿಂದ ಜೆಡಿಎಸ್ ಯುವ ಚೇತನ ಯಾತ್ರೆ

Published:
Updated:

ಬೆಂಗಳೂರು:  ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ `ನವಶಕ್ತಿ ಸಂಚಲನ-ದಾವಣಗೆರೆಯಲ್ಲಿ ಮಿಲನ~ ಹೆಸರಿನಲ್ಲಿ ಯುವಚೇತನ ಯಾತ್ರೆ ಬುಧವಾರ ಬೀದರ್‌ನಿಂದ ಆರಂಭಗೊಂಡು ಏಪ್ರಿಲ್ 22ರಂದು ದಾವಣಗೆರೆಯಲ್ಲಿ ಕೊನೆಗೊಳ್ಳಲಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ಪ್ರವಾಸದಲ್ಲಿ ಪಾಲ್ಗೊಳ್ಳುವ ಯುವ ಮುಖಂಡರ ತಂಡ ಮಂಗಳವಾರ ಪಕ್ಷದ ಕೇಂದ್ರ ಕಚೇರಿಯಿಂದ ನೇರವಾಗಿ ಬೀದರ್‌ಗೆ ತೆರಳಿದೆ. ಅಲ್ಲಿಂದ ಶುರುವಾಗುವ ಯಾತ್ರೆ ರಾಯಚೂರು, ಕೊಪ್ಪಳ, ಗುಲ್ಬರ್ಗ, ಯಾದಗಿರಿ ಸೇರಿದಂತೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸಂಚರಿಸಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.ದಾವಣಗೆರೆಯಲ್ಲಿ ರಾಜ್ಯಮಟ್ಟದ ಬೃಹತ್ ಯುವ ಸಮಾವೇಶ ನಡೆಯಲಿದ್ದು, ಸುಮಾರು ಎರಡು ಲಕ್ಷದಷ್ಟು ಯುವ ಜನರು ಭಾಗವಹಿಸಲಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೆಚ್ಚು ಜನರನ್ನು ಸಂಘಟಿಸುವ ಯುವಕರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆದ್ಯತೆ ನೀಡಲಾಗುವುದು.ಈ ನಿಟ್ಟಿನಲ್ಲಿ ಸಮರ್ಥ ಯುವಕರನ್ನು ಗುರುತಿಸುವಂತೆ ಹಿರಿಯ ನಾಯಕರು ಮಧು ಅವರಿಗೆ ಸೂಚನೆ ನೀಡಿದ್ದಾರೆ ಎಂದರು.ಮುಖಂಡರಾದ ಸಿ.ನಾರಾಯಣಸ್ವಾಮಿ, ನಟಿ ಪೂಜಾ ಗಾಂಧಿ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry