ಸೋಮವಾರ, ಜೂನ್ 21, 2021
27 °C

ಇಂದಿನಿಂದ ತಮಿಳುನಾಡು ಕನ್ನಡಿಗರ ದ್ವಿತೀಯ ಸಾಹಿತ್ಯ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ತಮಿಳುನಾಡು ಘಟಕದ ವತಿಯಿಂದ ತಮಿಳುನಾಡು ಕನ್ನಡಿಗರ ದ್ವಿತೀಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮಾವೇಶ ಶನಿವಾರ (ಮಾ. 8) ಹಾಗೂ ಭಾನುವಾರ ಚೆನ್ನೈನ ಕರ್ನಾಟಕ ಸಂಘದ ಡಾ.ಯು.ರಾಮ ರಾವ್‌ ಕಲಾ ಮಂಟಪದಲ್ಲಿ ನಡೆಯಲಿದೆ.ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ವಿ.ಗೋಪಾಲಕೃಷ್ಣ ಸಮ್ಮೇಳನಾ­ಧ್ಯಕ್ಷರಾಗಿರುವರು.ಶನಿವಾರ ಸಂಜೆ 4.30ಕ್ಕೆ  ಹಿರಿಯ ಸಾಹಿತಿ ಡಾ.ಜಿ.­ಎಸ್‌.­ಸಿದ್ದಲಿಂಗಯ್ಯ ಸಮ್ಮೇಳನವನ್ನು ಉದ್ಘಾ­ಟಿ­ಸುವರು. ‘ಪ್ರಜಾವಾಣಿ’ಯ ಕಾರ್ಯ­ನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ, ಇಂಡಿಯನ್‌ ಓವರ್‌­ಸೀಸ್‌ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇ­ಶಕ ಎಂ.ನರೇಂದ್ರ ಅತಿಥಿ­ಗಳಾಗಿ ಭಾಗ­ವ­ಹಿಸುವರು.ಭಾನುವಾರ ಬೆಳಿಗ್ಗೆ 10ರಿಂದ ಸಾಹಿತ್ಯ ಗೋಷ್ಠಿ, 11.30ರಿಂದ ಹಾಸ್ಯ ಕಾರ್ಯಕ್ರಮ, ಮಧ್ಯಾಹ್ನ 2.30ರಿಂದ ಕವಿ ಪ್ರೊ.ಸಿದ್ದಲಿಂಗಯ್ಯ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.ಸಂಜೆ 4.30ಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಸಮಾ­ರೋಪ ಭಾಷಣ ಮಾಡು­ವರು ಎಂದು ಪ್ರಕಟಣೆಯಲ್ಲಿ  ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.