ಶುಕ್ರವಾರ, ನವೆಂಬರ್ 22, 2019
26 °C

ಇಂದಿನಿಂದ `ನಾನ್ ಫಿಕ್ಶನ್' ಚಿತ್ರೋತ್ಸವ...

Published:
Updated:

`ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯುಮನ್ ಸೆಟಲ್‌ಮೆಂಟ್' ಸಂಸ್ಥೆಯು ಮೂರು ದಿನಗಳ (ಏ.26ರಿಂದ ಏ28) ಸಿನಿಮೋತ್ಸವವನ್ನು ಹಮ್ಮಿಕೊಂಡಿದೆ.ಚಿತ್ರ ನಿರ್ದೇಶಕರಾದ ಆನಂದ ಪಟವರ್ಧನ್, ಸಮೀರಾ ಜೈನ್, ಅವಿಜಿತ್ ಮುಕುಲ್ ಕಿಶೋರ್, ಸುನಂದಾ ಭಟ್, ಸುಷ್ಮಾ ವೀರಪ್ಪಾ, ಹನ್ಸಾ ಥಪ್ಲಿಯಾಲ್ ಹಾಗೂ ಅಮಿತ್ ಮಹಾಂತಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.ಏ.26 ಮಧ್ಯಾಹ್ನ 3.30ಕ್ಕೆ ಆನಂದ ಪಟವರ್ಧನ್ ಅವರ `ಬಾಂಬೆ ಅವರ್ ಸಿಟಿ' ಚಿತ್ರ ಪ್ರದರ್ಶನಗೊಳ್ಳಲಿದೆ. ಸಂಜೆ 6ಕ್ಕೆ `ದಿ ಸಿಟಿ ಇನ್ ನಾನ್ ಫಿಕ್ಶನ್' ಕುರಿತು ಸಂವಾದ. ಏ.27 ಸಂಜೆ 4ಕ್ಕೆ ಸಮೀರಾ ಜೈನ್ ಅವರ `ಮೇರಾ ಅಪನಾ ಶೆಹೆರ್' ಚಿತ್ರ. ಸಂಜೆ 6ಕ್ಕೆ `ಕೋಡ್ಸ್ ಆಫ್ ನಾನ್ ಫಿಕ್ಶನ್' ಕುರಿತು ಸಂವಾದ.ಏ.28 ಬೆಳಿಗ್ಗೆ 11.50ಕ್ಕೆ ಸುಷ್ಮಾ ವೀರಪ್ಪ ಅವರ `ವೆನ್ ಶಂಕರ್ ನಾಗ್ ಕಮ್ಸ ಆಸ್ಕಿಂಗ್', ಮಧ್ಯಾಹ್ನ 3ಕ್ಕೆ ಸುನಂದಾ ಭಟ್ ಅವರ `ಹ್ಯಾವ್ ಯು ಸೀನ್ ದಿ ಅರಾನಾ', ಸಂಜೆ 5ಕ್ಕೆ ಅವಿಜಿತ್ ಮುಕುಲ್ ಕಿಶೋರ್ ಅವರ `ವರ್ಟಿಕಲ್ ಸಿಟಿ' ಚಿತ್ರ ಪ್ರದರ್ಶನ.ಸ್ಥಳ: ಐಐಎಚ್‌ಎಸ್ ಬೆಂಗಳೂರು ಸಿಟಿ ಕ್ಯಾಂಪಸ್, ನಂ.197/36, 2ನೇ ಮುಖ್ಯರಸ್ತೆ, ಸದಾಶಿವನಗರ. 

ಪ್ರತಿಕ್ರಿಯಿಸಿ (+)