ಶನಿವಾರ, ಜೂನ್ 12, 2021
24 °C

ಇಂದಿನಿಂದ ಪಾಕ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿಯನ್ ಫೆಡರೇಶನ್ ಆಫ್ ಕಲಿನರಿ ಅಸೋಸಿಯೇಶನ್ಸ್ ಇದೇ ಶುಕ್ರವಾರ(ಮಾ.23)ದಿಂದ ಮೂರು ದಿನಗಳ ಕಾಲ `ಐದನೇ ರಾಷ್ಟ್ರೀಯ ಕಲಿನರಿ ಸಮ್ಮೇಳನ~ ಏರ್ಪಡಿಸಿದೆ.

ಪಾಕಶಾಸ್ತ್ರದಲ್ಲಿ ಹೊಸತನ, ಬಾಣಸಿಗರ ಕ್ರಿಯಾಶೀಲತೆ, ಆಹಾರ ವೈವಿಧ್ಯ ಎಲ್ಲವನ್ನೂ ಒಂದೆಡೆ ಪರಿಚಯಿಸುವ ವಿಶೇಷ ಕಾರ್ಯಕ್ರಮ ಇದು.

 

ಸುಮಾರು 600ಕ್ಕೂ ಹೆಚ್ಚು ವೃತ್ತಿಪರ ಬಾಣಸಿಗರು ತಾಜ್ ವಿವಂತಾದಲ್ಲಿ ಸೇರಲಿದ್ದಾರೆ. ಮೂರು ದಿನಗಳ ಈ ಸಮ್ಮೇಳನದಲ್ಲಿ ವಿಶಿಷ್ಟ ಬಗೆಯ ಆಹಾರ ಪದ್ಧತಿಗಳನ್ನು ಪರಿಚಯಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಮೂರು ದಿನವೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಮೊದಲ ದಿನ ಕರ್ನಾಟಕದ ವಿಶಿಷ್ಟ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಲಾಗುವುದು. ಎರಡನೆ ದಿನ `ವಿಶ್ವದ ಹಲವು ಆಹಾರ ಪದ್ಧತಿ~ಗಳ ಬಗ್ಗೆ ಮಾಹಿತಿ ನೀಡಲಾಗುವುದು ಹಾಗೂ ಕೊನೆ ದಿನ `ಶೆಫ್ ವಿತ್ ಚೈಲ್ಡ್~ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಸಮ್ಮೇಳನದಲ್ಲಿ ಹೋಟೆಲ್ ಉದ್ದಿಮೆ ಬಗ್ಗೆ ಸಂಪೂರ್ಣ ಮಾಹಿತಿ, ಭಾರತೀಯ ಪಾಕಶಾಸ್ತ್ರದ ಮಹತ್ವ, ಹೋಟೆಲ್ ಉದ್ಯಮದ ಹೊಸ ಆವಿಷ್ಕಾರ, ಮಾರುಕಟ್ಟೆ, ಕೌಶಲ್ಯ ತರಬೇತಿ ಇನ್ನೂ ಹಲವು ಮಾಹಿತಿಗಳನ್ನು ಬಾಣಸಿಗರಿಗೆ ನೀಡಲಾಗುವುದು ಎಂದರು ಐಎಫ್‌ಸಿಎ ಅಧ್ಯಕ್ಷ ಶೆಫ್ ಮಂಜಿತ್ ಸಿಂಗ್.ನಗರದ ಬಾಣಸಿಗರಿಗೆ ಈ ಸಮ್ಮೇಳನ ಉತ್ತಮ ಅವಕಾಶ ಒದಗಿಸಿಕೊಟ್ಟಿದೆ. ಆಹಾರದ ಬಗೆಗಿನ ಹಲವು ಮಾಹಿತಿ, ಹೋಟೆಲ್ ಉದ್ಯಮದ ಬೆಳವಣಿಗೆ ಹೀಗೆ ಹಲವು ವಿಷಯಗಳನ್ನು ಇಲ್ಲಿ ತಿಳಿದುಕೊಳ್ಳಬಹುದು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.