ಇಂದಿನಿಂದ ಬೆಂಗಳೂರು ಸಾಹಿತ್ಯೋತ್ಸವ

7

ಇಂದಿನಿಂದ ಬೆಂಗಳೂರು ಸಾಹಿತ್ಯೋತ್ಸವ

Published:
Updated:
ಇಂದಿನಿಂದ ಬೆಂಗಳೂರು ಸಾಹಿತ್ಯೋತ್ಸವ

ಬಹು ದೊಡ್ಡ ಸಾಹಿತ್ಯ ಉತ್ಸವಕ್ಕೆ ನಗರ ಸಾಕ್ಷಿಯಾಗಲಿದೆ. ಇಂದಿನಿಂದ (ಡಿ.7) ಆರಂಭವಾಗುತ್ತಿರುವ `ಬೆಂಗಳೂರು ಸಾಹಿತ್ಯೋತ್ಸವ'ದಲ್ಲಿ ದೇಶದ ಖ್ಯಾತ ಸಾಹಿತಿಗಳು ವಿವಿಧ ವಿಷಯಗಳ ಕುರಿತು ಚಿಂತನ-ಮಂಥನದಲ್ಲಿ ಪಾಲ್ಗೊಳ್ಳಲಿದ್ದಾರೆ.ಪ್ರಜಾವಾಣಿ ಮತ್ತು `ಡೆಕ್ಕನ್ ಹೆರಾಲ್ಡ್' ಸಹಯೋಗದಲ್ಲಿ ಡಿ. 9ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಸಾಹಿತ್ಯಕ ನೆಲೆಯಲ್ಲಿ ವಿವಿಧ ವಿಷಯಗಳ ಕುರಿತು ತಿಳಿದುಕೊಳ್ಳುವ ಅವಕಾಶ ಸೃಷ್ಟಿಯಾಗಲಿದೆ. ನಗರದ ಜಯಮಹಲ್ ಪ್ಯಾಲೇಸ್‌ನಲ್ಲಿ ನಡೆಯಲಿರುವ ಈ ಚರ್ಚೆ, ಸಂವಾದ, ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭವು ಇಂದು (ಶುಕ್ರವಾರ, ಡಿ. 7) ಸಂಜೆ 4.30ಕ್ಕೆ ನೆರವೇರಲಿದ್ದು, ಈ ಸಂದರ್ಭದಲ್ಲಿ `ಬಿಎಲ್‌ಎಫ್ (ಬೆಂಗಳೂರು ಸಾಹಿತ್ಯ ಉತ್ಸವ) ಲಿಟರರಿ ಜರ್ನಲ್' ಲೋಕಾರ್ಪಣೆಯಾಗಲಿದೆ. `ಹ್ಯಾವ್ ಯೂ ಸೀನ್ ದಿ ಸೋಲ್, ದಿ ಕ್ರಾಫ್ಟ್ ಆಫ್ ಪೊಯೆಟ್ರಿ' ಕುರಿತು ಗುಲ್ಜಾರ್ ಮತ್ತು ಪವನ್ ವರ್ಮಾ ಸಂವಾದ ನಡೆಸಲಿದ್ದಾರೆ.ಸಂಜೆ 6.30ಕ್ಕೆ `ಕ್ರಾಸ್‌ಫೈರ್ ವಿತ್ ಚೇತನ್ ಭಗತ್' ಸಂವಾದ, ಸಂಜೆ 7.30ಕ್ಕೆ `ಸ್ಟ್ರಿಂಗ್ಸ್ ಅಟಾಚ್ಡ್' ಸಂಗೀತ ಕಾರ್ಯಕ್ರಮದಲ್ಲಿ ಡಾ. ಜಯಂತಿ ಕುಮರೇಶ್ ಅವರ ವೀಣಾವಾದನ ಮತ್ತು ವಿ. ಆರ್ ಕುಮರೇಶ್ ವಯಲಿನ್ ವಾದನ ಇರುತ್ತದೆ.ಡಿಸೆಂಬರ್ 8, ಶನಿವಾರಬೆಳಿಗ್ಗೆ 9.30: `ಸೃಜನಶೀಲತೆ': ಕ್ರಿಯೇಟಿವಿಟಿ ಇನ್ ರೈಟಿಂಗ್' ಕುರಿತು ಸಾಹಿತಿ ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಕಂಬಾರ, ಕೆ. ಎಸ್. ನಿಸಾರ್ ಅಹಮದ್ ಹಾಗೂ ಯು.ಆರ್. ಅನಂತಮೂರ್ತಿ ಮಾತನಾಡಲಿದ್ದಾರೆ. ನಿರ್ವಹಣೆ: ಮನು ಚಕ್ರವರ್ತಿ.ಬೆಳಿಗ್ಗೆ 10.30: `ನಜ್ಮ್  ಔರ್ ತರ್ಕಶ್: ಪೊಯೆಟ್ರಿ ವಿತ್ ಗುಲ್ಜಾರ್ ಅಂಡ್ ಜಾವೇದ್ ಅಖ್ತರ್'.ಬೆಳಿಗ್ಗೆ 11.30: `ಕ್ರಾನಿಕ್ಲಿಂಗ್ ಲೈವ್ಸ್: ಬಯೋಗ್ರಫೀಸ್ ಅಂಡ್ ಮೆಮೊರೀಸ್' ಕುರಿತು ಅಜಯ್ ಬೋಸ್, ಭಾವನಾ ಸೊಮಾಯಾ, ತವ್ಲೀನ್ ಸಿಂಗ್ ಮತ್ತು ವಿಕ್ರಮ್ ಸಂಪತ್ ಅವರಿಂದ ಸಂವಾದ.  ಇದೇ ಸಂದರ್ಭದಲ್ಲಿ ತವ್ಲೀನ್ ಸಿಂಗ್ ಅವರ `ದರ್ಬಾರ್' ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ನಿರ್ವಹಣೆ: ಸುನಿಲ್ ಸೇತಿ.ಮಧ್ಯಾಹ್ನ 1.15: `ದಿ ಬಿಸಿನೆಸ್ ಆಫ್ ಬುಕ್ಸ್' ಕುರಿತ ಕ್ಯಾರೊಲಿನ್ ನ್ಯೂಬರಿ, ಗೌತಮ್ ಪದ್ಮನಾಭನ್, ಕಾರ್ತಿಕ ವಿ. ಕೆ, ಪ್ರಕಾಶ್ ಕಂಬತ್ತಳ್ಳಿ, ಮತ್ತು ಸಂಜನಾ ರಾಯ್ ಚೌಧರಿ, ಅವರ ಸಂವಾದ. ನಿರ್ವಹಣೆ: ಆ್ಯನೀ ಚಾಂಡಿ.ಮಧ್ಯಾಹ್ನ 2.15: `ಫರ್ಮೆಂಟ್ ಇನ್ ವೆಸ್ಟ್ ಏಷಿಯಾ' ಕುರಿತು ಬಿ. ರಾಮನ್, ಐ.ಪಿ. ಖೋಸ್ಲಾ ಮತ್ತು ಜಾನ್ ಡಿ. ಬಾಲಿಯನ್ ಅವರಿಂದ ಸಂವಾದ. ನಿರ್ವಹಣೆ: ಸಿ. ವಿ. ರಂಗನಾಥನ್.ಮಧ್ಯಾಹ್ನ 3.15: `ಪ್ಲೇಯಿಂಗ್ ದಿ ರೈಟ್ ಗೇಮ್' ಕುರಿತು ಶೇಹನ್ ಕರುಣಾತಿಲಕ, ಸುರೇಶ್ ಮೆನನ್, ವಿನೋದ್ ನಾಯ್ಡು ಅವರಿಂದ ಸಂವಾದ. ನಿರ್ವಹಣೆ: ಬೋರಿಯಾ ಮಜುಂದಾರ್.ಸಂಜೆ 4.15: `ಎಕ್ಸ್‌ಪಿರಿಯನ್ಸ್, ಮೆಮೊರಿ ಅಂಡ್ ಸ್ಟೋರೀಸ್' ಕುರಿತು ಅನಿತಾ ನಾಯರ್, ಬಿಮನ್ ನಾಥ್, ಕಾವೇರಿ ನಂಬೀಶನ್ ಮತ್ತು ಮಂಜು ಕಪೂರ್ ಅವರಿಂದ ಸಂವಾದ. ನಿರ್ವಹಣೆ: ಉಷಾ ಕೆ. ಆರ್.ಸಂಜೆ 5.15: `ಲಿಟರೇಚರ್ ಇನ್ ದಿ ಟ್ವಿಟರ್ ಎರಾ' ಕುರಿತು ಹರೀಶ್ ಬಿಜೂರ್ ಮತ್ತು ಸುಧೀಂದ್ರ ಕುಲಕರ್ಣಿ ಅವರಿಂದ ಸಂವಾದ. ನಿರ್ವಹಣೆ: ಕೆ. ವೈತೀಶ್ವರನ್.ಸಂಜೆ 6: `ದಿ ವರ್ಲ್ಡ್ ಇನ್ ವರ್ಸ್' ಕುರಿತು ಜಯಂತ್ ಕಾಯ್ಕಿಣಿ, ಖಲೀಲುರ‌್ರಹಮಾನ್, ಸಂಪೂರ್ಣಾ ಚಟರ್ಜಿ ಮತ್ತು ಶಾಯಿಸ್ತಾ ಯೂಸುಫ್ ಅವರಿಂದ ಸಂವಾದ. ನಿರ್ವಹಣೆ: ಮಮತಾ ಸಾಗರ್.ಸಂಜೆ 7.15ಕ್ಕೆ ಕೆರೆಮನೆ ಶಿವಾನಂದ ಹೆಗ್ಡೆ ತಂಡದಿಂದ ವಾಲಿ ಮೋಕ್ಷ ಯಕ್ಷಗಾನ ಪ್ರದರ್ಶನ.ಡಿಸೆಂಬರ್ 9, ಭಾನುವಾರಬೆಳಿಗ್ಗೆ 9.30: `ಹೊಸ ಅಲೆ: ನ್ಯೂ ವೇವ್ಸ್ ಇನ್ ಕನ್ನಡ ಲಿಟರೇಚರ್' ಕುರಿತು ಬಾನು ಮುಷ್ತಾಕ್, ಜಯಂತ್ ಕಾಯ್ಕಿಣಿ, ಕುಂ. ವೀರಭದ್ರಪ್ಪ ಮತ್ತು ವೈದೇಹಿ ಅವರಿಂದ ಸಂವಾದ. ನಿರ್ವಹಣೆ: ಪ್ರಕಾಶ್ ಬೆಳವಾಡಿ.ಬೆಳಿಗ್ಗೆ 10.30: `ಈಸ್ ಫಿಕ್ಷನ್ ಲೂಸಿಂಗ್ ಇಟ್ಸ್ ಮ್ಯಾಜಿಕ್? ಕುರಿತು ಜಾಹ್ನವಿ ಬರುವಾ, ಜಯಶ್ರೀ ಮಿಶ್ರಾ, ಶಶಿ ದೇಶಪಾಂಡೆ ಮತ್ತು ಟಾರ್ಕ್ವಿನ್ ಹಾಲ್ ಅವರಿಂದ ಸಂವಾದ. ನಿರ್ವಹಣೆ: ಸುನಿಲ್ ಸೇತಿ.ಬೆಳಿಗ್ಗೆ 11.30: `ಸ್ಟೇಜ್ ಆಫ್ ಲೈಫ್' ಕುರಿತು ಮಹೇಶ್ ದತ್ತಾನಿ ಮತ್ತು ಆಶಿಶ್ ಸೇನ್ ಅವರ ಸಂವಾದ.ಮಧ್ಯಾಹ್ನ 1.30: ಅಮಿಶ್ ತ್ರಿಪಾಠಿ ಅವರೊಂದಿಗೆ ಸಂವಾದ. ನಿರ್ವಹಣೆ: ದೀಪ್ತಿ ತಲ್ವಾರ್.ಮಧ್ಯಾಹ್ನ 2.15: `ಹಾರ್ಕ್ ದಿ ನ್ಯೂ ಬ್ರಿಗೇಡ್' ಕುರಿತ ಅರುಣ್ ರಾಮನ್, ಶೆಫಾಲಿ ವಾಸುದೇವ್, ಸುದೀಪ್ ನಗರ್‌ಕರ್, ವಿಕ್ರಾಂತ್ ದತ್ತ ಮತ್ತು ಯಾಸ್ಮೀನ್ ಪ್ರೇಮ್‌ಜೀ ಅವರಿಂದ ಸಂವಾದ. ನಿರ್ವಹಣೆ: ಶೋಭಾ ನಾರಾಯಣ್.ಮಧ್ಯಾಹ್ನ 3.15: `ಬ್ಯಾಂಗಲೋರ್/ ಬೆಂಗಳೂರು: ಮಲ್ಟಿಪಲ್ ಸಿಟಿ?' ಕುರಿತು ಪ್ರಕಾಶ್ ಬೆಳವಾಡಿ, ರಮ್ಯಾ, ಶೋಭಾ ಡೇ, ಟಿ.ವಿ. ಮೋಹನ್‌ದಾಸ್ ಪೈ ಮತ್ತು ಯು. ಆರ್. ಅನಂತಮೂರ್ತಿ ಅವರಿಂದ ಸಂವಾದ. ನಿರ್ವಹಣೆ: ವಿ. ರವಿಚಂದರ್.ಸಂಜೆ 4.15: `ಸ್ಕ್ರಿಪ್ಟಿಂಗ್ ಇಂಡಿಯಾ' ಕುರಿತು ಆಕಾಶ್ ಬ್ಯಾನರ್ಜಿ, ಆಕಾಶ್ ಕಪೂರ್, ನಂದನ್ ನೀಲೇಕಣಿ, ಸಂಜೀವ್ ಸನ್ಯಾಲ್ ಮತ್ತು ಸರ್ ಮಾರ್ಕ್ ಟುಲಿ ಅವರಿಂದ ಸಂವಾದ. ಸಂವಾದ ಮತ್ತು `ಟೇಲ್ಸ್ ಫ್ರಂ ಶೈನಿಂಗ್ ಮತ್ತು ಸಿಂಕಿಂಗ್ ಇಂಡಿಯಾ' ಲೋಕಾರ್ಪಣೆ. ನಿರ್ವಹಣೆ: ಪವನ್ ವರ್ಮಾ.ಸಂಜೆ 5.15: `ಸೇಠ್‌ಜಿ' ಲೋಕಾರ್ಪಣೆ. ಮತ್ತು ಶೋಭಾ ಡೇ ಹಾಗೂ ಸುನಿಲ್ ಸೇತಿ ಅವರ ಸಂವಾದ.ಸಂಜೆ 6: `ಬಂಗಾರದ ಮನುಷ್ಯ: ಬೆಂಗಳೂರು ಲಿಟರೇಚರ್ ಟ್ರಿಬ್ಯೂಟ್ ಟು ಡಾ. ರಾಜ್‌ಕುಮಾರ್' ಇದ್ದು, ಪುನೀತ್ ರಾಜ್‌ಕುಮಾರ್, ಮಾಯಾ ಚಂದ್ರ ಅವರ ಸಂವಾದ. `ಡಾ. ರಾಜ್‌ಕುಮಾರ್- ಆ್ಯನ್ ಅನಾಲಿಸಿಸ್ ಆಫ್ ದಿ ಫೆನಾಮಿನಾ' ಕಿರುಚಿತ್ರ ಪ್ರದರ್ಶನ.ಮಕ್ಕಳ ಕೂಟಈ ಸಾಹಿತ್ಯದ ಹಬ್ಬದಲ್ಲಿ ಮಕ್ಕಳೂ ಒಳಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಚಿಲ್ಡ್ರನ್ಸ್ ರೀಡಿಂಗ್ ಅವರ್' ಎಂಬ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದು, ಜಯಮಹಲ್‌ನ ಬ್ಯಾಂಕ್ವೆಟ್ ಸಭಾಂಗಣದಲ್ಲಿ `ಮಕ್ಕಳ ಕೂಟ' ಏರ್ಪಾಡಾಗಿದೆ. ಕಾರ್ಯಕ್ರಮದ ವಿವರ ಇಲ್ಲಿದೆ...ಡಿಸೆಂಬರ್ 8, ಶನಿವಾರಮಧ್ಯಾಹ್ನ 2.15: `ಪಾಪು ಗಾಂಧಿ ಬಾಪು ಆದ ಕತೆ' ಕುರಿತು ಸಾಹಿತಿ ಬೋಳುವಾರ್ ಮೊಹಮದ್ ಕುಂಞಿ ಅವರಿಂದ ಸಂವಾದ.

ಸಂಜೆ 4.40: ಪ್ರಶಸ್ತಿ ವಿಜೇತ ಮಕ್ಕಳ ಚಿತ್ರಕಾರ ನಾಡಿಯಾ ಬುದ್ದೆ ಅವರೊಂದಿಗೆ ಸಂವಾದ.

ಸಂಜೆ 5.50: ಪವನ್ ವರ್ಮಾ ಅವರಿಂದ ಅವರ ನೂತನ ಪುಸ್ತಕ `ಚಾಣಕ್ಯ ನ್ಯೂ ಮಾನಿಫೆಸ್ಟೊ: ಟು ರಿಸಾಲ್ವ್ ದಿ ಕ್ರೈಸಿಸ್ ವಿತಿನ್ ಇಂಡಿಯಾ' ಕುರಿತು ಸಂವಾದ.ಡಿಸೆಂಬರ್ 9 ಭಾನುವಾರಮಧ್ಯಾಹ್ನ 2.15: ಕಲ್ಕೆರೆ ಸಂಗೀತ ವಿದ್ಯಾಲಯದಿಂದ ಹಿಂದೂಸ್ತಾನಿ ಸಂಗೀತ.

ಸಂಜೆ 4.30: `ಆರ್ ದಿ ಮೋಟಾರ್ ಸೈಕ್ಲಿಸ್ಟ್ ಔಟ್ ದೇರ್ ಇನ್ ಸ್ಪೇಸ್? ಮೇಬಿ' ಕುರಿತು ರೂಪಾ ಪೈ ಮಾತನಾಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry