ಇಂದಿನಿಂದ ಮಕ್ಕಳ ಚಿತ್ರೋತ್ಸವ

7

ಇಂದಿನಿಂದ ಮಕ್ಕಳ ಚಿತ್ರೋತ್ಸವ

Published:
Updated:
ಇಂದಿನಿಂದ ಮಕ್ಕಳ ಚಿತ್ರೋತ್ಸವ

`ಎಂಟನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ' ಇಂದಿನಿಂದ ಬೆಂಗಳೂರು ಸೇರಿದಂತೆ  ಮೈಸೂರು, ಹುಬ್ಬಳ್ಳಿ, ಧಾರವಾಡ ಹಾಗೂ ಮಂಗಳೂರು ನಗರಗಳಲ್ಲಿ ನಡೆಯಲಿದೆ. ಜನವರಿ 9ರಿಂದ 13ರವರೆಗೆ ನಗರದಲ್ಲಿ  ನಡೆಯಲಿರುವ ಚಿತ್ರೋತ್ಸವದಲ್ಲಿ 25 ದೇಶಗಳ 135 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.ಈ ಬಾರಿಯ ಚಲನಚಿತ್ರೋತ್ಸವದಲ್ಲಿ ದೇಶಾಧಾರಿತ, ಸ್ಪರ್ಧಾತ್ಮಕ ಹಾಗೂ ಪರಿಸರ ಸಂಬಂಧಿ ಎಂಬ ಮೂರು ವರ್ಗದಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಪ್ರೇಕ್ಷಕರು ತಮ್ಮ ಆದ್ಯತೆಯನುಸಾರ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ. ಉದ್ಘಾಟನಾ ಸಮಾರಂಭ...

ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ. ಉದ್ಘಾಟನೆ: ಉಪಮುಖ್ಯಮಂತ್ರಿ ಆರ್.ಅಶೋಕ್, ಅಧ್ಯಕ್ಷತೆ: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧ. ಅತಿಥಿಗಳು: ಹಿರಿಯ ನಟಿ ಬಿ.ಸರೋಜಾದೇವಿ, ಮೇಯರ್ ವೆಂಕಟೇಶಮೂರ್ತಿ, ನಟ ಪುನೀತ್ ರಾಜ್‌ಕುಮಾರ್. ಸಚಿವರಾದ ಆನಂದ್ ಸಿಂಗ್, ರೇಣುಕಾಚಾರ್ಯ, ಸಂಸದ ಪಿ.ಸಿ.ಮೋಹನ್, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ.ವಿಜಯಕುಮಾರ್. ಮಧ್ಯಾಹ್ನ 3.ಚಿತ್ರೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ 9.30ಕ್ಕೆ ಮಕ್ಕಳಿಂದ ವಾಕಥಾನ್ ಆಯೋಜಿಸಲಾಗಿದೆ. ಉದ್ಘಾಟನೆ: ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಬಿ.ಮಿರ್ಜಿ, ಚಾಲನೆ: ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್. ಸ್ಥಳ: ಚಾಲುಕ್ಯ ಸರ್ಕಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry