ಶನಿವಾರ, ನವೆಂಬರ್ 23, 2019
23 °C

ಇಂದಿನಿಂದ `ಮಲ್ಲಿಕಾ' ಉತ್ಸವ ಆರಂಭ

Published:
Updated:

ದಾವಣಗೆರೆ: ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏ. 26, 27ರಂದು `ಮಲ್ಲಿಕಾ-2013' ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಟಿ.ಎಂ. ವೀರಗಂಗಾಧರಸ್ವಾಮಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅಂದು ನವದೆಹಲಿಯ ಟೀಮ್ ಕಂಪ್ಯೂಟರ್ಸ್‌ ಕಂಪೆನಿ ಬಿಸಿನೆಸ್ ಲೀಡ್ ಮತ್ತು ಡೆಲಿವರಿ ಮುಖ್ಯಸ್ಥ ಹರಿಕೃಷ್ಣ ಕಾರ್ಯಕ್ರಮ ಉದ್ಘಾಟಿಸುವರು. ಶ್ರೀಶೈಲ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಜಿ.ಎಂ. ಪ್ರಸನ್ನಕುಮಾರ್, ಖಜಾಂಚಿ ಜಿ.ಎಸ್. ಅನಿತ್‌ಕುಮಾರ್, ಡಾ.ಬಿ.ಟಿ. ಪಾಟೀಲ್ ಭಾಗವಹಿಸುವರು. ಶ್ರೀಶೈಲ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ, ಜಿಎಂಐಟಿ ಕಾಲೇಜಿನ ಅಧ್ಯಕ್ಷ ಜಿ.ಎಂ. ಲಿಂಗರಾಜು ಅಧ್ಯಕ್ಷತೆ ವಹಿಸುವರು.ಸಂಜೆ 4ಕ್ಕೆ `ಪರಾರಿ' ಚಿತ್ರತಂಡ ಆಗಮಿಸಲಿದ್ದು, ಬೆಂಗಳೂರಿನ ರಾಕ್‌ಬ್ಯಾಂಡ್ ತಂಡ ಮನರಂಜನಾ ಕಾರ್ಯಕ್ರಮ ನೀಡಲಿದೆ. ಶೇ 90 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ವಿತರಿಸಲಾಗುವುದು. ಪಿಎಚ್.ಡಿ ಪಡೆದ ಅಧ್ಯಾಪಕರು, ಸಾಧನೆ ತೋರಿದ ವಿಧ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು.ಏ. 27ರ ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ವಿಟಿಯು ಕುಲಸಚಿವ (ಮೌಲ್ಯಮಾಪನ) ಡಾ.ಎಚ್.ಜಿ. ಶೇಖರಪ್ಪ, ಚಲನಚಿತ್ರ ಹಿನ್ನೆಲೆ ಗಾಯಕಿ ಆಕಾಂಕ್ಷಾ ಬಾದಾಮಿ, ಪ್ರಾಂಶುಪಾಲ ಡಾ.ಎಸ್.ಜಿ. ಹಿರೇಮಠ್ ಪಾಲ್ಗೊಳ್ಳುವರು.ಪ್ರೊ.ಶ್ರೀಧರ್, ಪ್ರೊ.ತೇಜಸ್ವಿ ಕಟ್ಟಿಮನಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)