ಇಂದಿನಿಂದ ಮಹಿಳಾ ಸಮಾವೇಶ

7

ಇಂದಿನಿಂದ ಮಹಿಳಾ ಸಮಾವೇಶ

Published:
Updated:

ನಗರದ ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ಐದನೆಯ ಅಂತರರಾಷ್ಟ್ರೀಯ ಮಹಿಳಾ ಸಮಾವೇಶ ಶುಕ್ರವಾರದಿಂದ 5ರವರೆಗೆ ನಡೆಯಲಿದೆ. 53ದೇಶದ ನೂರಕ್ಕೂ ಅಧಿಕ ಮಹಿಳೆಯರು ಕಾರ್ಯಕ್ಷೇತ್ರ ಹಾಗೂ ಜೀವನದಲ್ಲಿ ತಂತ್ರಜ್ಞಾನದ ಪಾತ್ರದ ಕುರಿತಾಗಿ ಚರ್ಚೆ ನಡೆಸಲಿದ್ದಾರೆ.ಮಾನವೀಯ ಸಂಪನ್ಮೂಲಗಳ ರಾಜ್ಯ ಮಂತ್ರಿ ಡಾ.ದಗ್ಗುಬಟ್ಟಿ ಪುರಂದೇಶ್ವರಿ, ಈಜಿಪ್ಟ್‌ನ ಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷ ಅಭ್ಯರ್ಥಿ ಬೋತಿಯಾನ ಕಮೆಲ್, ಇಸ್ರೇಲ್‌ನ ಸಂಸತ್ ಸದಸ್ಯೆ ರೋನಿತ್ ತಿರೋಷ್, ಸಂಸತ್ ಸದಸ್ಯೆ ಹೇಮಮಾಲಿನಿ, ಚಿತ್ರ ನಿರ್ಮಾಪಕಿ ಅಲ್ ವಜ್ದ್ ಅಲ್ ಫಯೇಜ್ ಇವರು ಸಮಾವೇಶದಲ್ಲಿ ಪಾಲ್ಗೊಳ್ಳುವ ಪ್ರಮುಖರು.ಸಮಾವೇಶದಲ್ಲಿ ಮಹಿಳೆಯರ ಮೇಲೆ ಹಾಗೂ ಸಮಾಜದ ಮೇಲೆ ತಂತ್ರಜ್ಞಾನದ ಪ್ರಭಾವ, ಆಧ್ಯಾತ್ಮಿಕತೆ ಮತ್ತು ತಂತ್ರಜ್ಞಾನದ ನಡುವಿನ ಸಂಬಂಧ, ಒತ್ತಡ ನಿವಾರಣೆಯಲ್ಲಿ ಯೋಗ ಮತ್ತು ಧ್ಯಾನದ ಮಹತ್ವದ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದು, ಬೆಳೆಯುತ್ತಿರುವ ರಾಷ್ಟ್ರಗಳ ಮಹಿಳೆಯರ ಸಬಲೀಕರಣಕ್ಕಾಗಿ ತಂತ್ರಜ್ಞಾನವನ್ನು ಬಳಸುವುದು ಮತ್ತು ಸಮಾಜದ ವಿವಿಧ ಹಂತಗಳಲ್ಲಿರುವ ಮಹಿಳೆಯರನ್ನು ಬೆಸೆಯಲು ತಂತ್ರಜ್ಞಾನದ ಬಳಕೆ- ಇವುಗಳ ಬಗ್ಗೆ ಚರ್ಚೆ ನಡೆಯಲಿದೆ.ಈ ಸಮಾವೇಶದಲ್ಲಿ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ರಷ್ಯಾದ ಸೇಂಟ್ ಪೀಟ್ಸ್‌ಬರ್ಗ್ ಬ್ಯಾಲೆ, ಬಲ್ಗೇರಿಯದ ಎಲಿಟ್ಸ್ ಟೊರೊಡೋವ ತಂತಮ್ಮ ದೇಶದ ತಾಳವಾದ್ಯಗಳ ಪ್ರದರ್ಶನ ನೀಡಲಿದ್ದಾರೆ. ಶೋಭನಾ ಚಂದ್ರಶೇಖರ್ ಭರತನಾಟ್ಯ ಮತ್ತು ಕಕೇಸಿಯನ್ ನರ್ತಕರಿಂದ ನೃತ್ಯ ಪ್ರದರ್ಶನವೂ ನಡೆಯಲಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9886660006.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry