ಇಂದಿನಿಂದ ರಂಗಾಯಣ ನಾಟಕೋತ್ಸವ ಆರಂಭ

ಬುಧವಾರ, ಜೂಲೈ 17, 2019
26 °C

ಇಂದಿನಿಂದ ರಂಗಾಯಣ ನಾಟಕೋತ್ಸವ ಆರಂಭ

Published:
Updated:

ಶಿವಮೊಗ್ಗ:  ನಗರದ ಕುವೆಂಪು ರಂಗ ಮಂದಿರದಲ್ಲಿ ಜೂನ್ 6ರಿಂದ 8ರವರೆಗೆ ಮೂರು ದಿನಗಳ ಕಾಲ ಪ್ರತಿ ದಿನ ಸಂಜೆ 7ಕ್ಕೆ ರಂಗಾಯಣ ನಾಟಕೋತ್ಸವ ನಡೆಯಲಿದೆ.6ರಂದು ಸಂಸ್ಕೃತ ಮೂಲದ ಭಾಸ ಮಹಾಕವಿಯ ನಾಟಕವನ್ನು ಡಾ.ಜೆ. ಶ್ರೀನಿವಾಸಮೂರ್ತಿ ಕನ್ನಡಕ್ಕೆ ತಂದಿದ್ದು `ಕರಾವಳಿ ಕರ್ಣಭಾರ~ ಹೆಸರಿನಲ್ಲಿ   ಗೋಪಾಲಕೃಷ್ಣ ನಾಯರಿ ನಿರ್ದೇಶಿಸಿದ್ದಾರೆ. ಅಂದೇ ಈ ಪ್ರದರ್ಶನದ ನಂತರ `ದಂ ಆಂಡ್ ರಿದಂ~ ಎಂಬ ವಿಭಿನ್ನ ಪ್ರಾತ್ಯಕ್ಷಿಕೆ ಇದೆ. ಶ್ರೀನಿವಾಸಭಟ್ (ಚೀನಿ) ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಈ ಪ್ರಾತ್ಯಕ್ಷಿಕೆ ಮೂಡಿಬರಲಿದೆ.7ರಂದು ಜೀನ್‌ಪಾಲ್ ಸಾರ್ತ್ರೆಯ ಈ ನಾಟಕವನ್ನು ಕನ್ನಡಕ್ಕೆ ಪ್ರೊ.ಲಿಂಗದೇವರು ಹಳೆಮನೆ ಹಾಗೂ ಪ್ರೊ.ಎಸ್.ಆರ್. ರಮೇಶ್ ಅವರು `ನೆರಳಿಲ್ಲದ ಮನುಷ್ಯರು~ ಹೆಸರಿನಲ್ಲಿ ತಂದಿದ್ದು, ಜೋಸೆಫ್ ನಿರ್ದೇಶಿಸಿದ್ದಾರೆ.8ರಂದು ಪ್ರೊ.ಚಂದ್ರಶೇಖರ ಪಾಟೀಲ ಅವರ `ಗೋಕರ್ಣದ ಗೌಡಶಾನಿ~ ನಾಟಕ, ಹುಲುಗಪ್ಪ ಕಟ್ಟೀಮನಿ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಎಲ್ಲಾ ನಾಟಕಗಳಿಗೂ ಪ್ರವೇಶ ದರ ್ಙ 10 ನಿಗದಿ ಮಾಡಲಾಗಿದೆ. ಈ ನಾಟಕಗಳನ್ನು ರಂಗಶಿಕ್ಷಣ ಕೇಂದ್ರದ ಡಿಪ್ಲೊಮಾ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ.ಉದ್ಘಾಟನೆ

ರಂಗಾಯಣ ನಾಟಕೋತ್ಸವಕ್ಕೆ 6ರಂದು ಸಂಜೆ 6ಕ್ಕೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡುವರು. ಮನೋವೈದ್ಯ ಡಾ.ಕೆ.ಎ. ಅಶೋಕ ಪೈ ಅತಿಥಿಗಳಾಗಿ ಪಾಲ್ಗೊಳ್ಳುವರು. ರಂಗಾಯಣ ನಿರ್ದೇಶಕ ಲಿಂಗದೇವರು ಹಳೆಮನೆ ಅಧ್ಯಕ್ಷತೆ ವಹಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry