ಇಂದಿನಿಂದ ರಂಭಾಪುರಿ ಶ್ರೀಗಳ ದರ್ಬಾರ್

7

ಇಂದಿನಿಂದ ರಂಭಾಪುರಿ ಶ್ರೀಗಳ ದರ್ಬಾರ್

Published:
Updated:

ಗಂಗಾವತಿ: ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ವೀರಸೋಮೇಶ್ವರ ರಾಜ ದೇಶೀಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಅ.16ರಿಂದ 24ರವರೆಗೆ ನಗರದಲ್ಲಿ ಧರ್ವೋತ್ತೇಜಕ ದಸರಾ ಧರ್ಮ ಸಮ್ಮೇಳನ ನಡೆಯಲಿದೆ.ಸಮ್ಮೇಳನಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚಾಲನೆ ನೀಡಲಿದ್ದಾರೆ. ಮೊದಲ ದಿನ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ `ಸಂಜೀವಿನಿ~ ಎಂಬ ಗ್ರಂಥ ಬಿಡುಗಡೆ ಮಾಡಲಿದ್ದಾರೆ. `ಧರ್ಮಾಚರಣೆಯಲ್ಲಿ ಶ್ರದ್ಧೆ, ಅಭ್ಯುದಯ~ ಬಗ್ಗೆ ಕೊಟ್ಟೂರಿನ ಶಿವಾಚಾರ್ಯ ಉಪನ್ಯಾಸ ನೀಡುವರು.ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ ಪಾಟೀಲ್, ಸಿ.ಎಂ. ಉದಾಸಿ, ಶಾಸಕರಾದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಪಾಲ್ಗೊಳ್ಳಲಿದ್ದಾರೆ. 

ಅ.17ರಂದು `ಸಿದ್ದಾಂತ ಶಿಖಾಮಣಿ ಸಾರ~ ಎಂಬ ಗ್ರಂಥವನ್ನು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್, ವೀರಶೈವ-ಬಸವಣ್ಣ ಎಂಬ ಗ್ರಂಥವನ್ನು ಗುಲ್ಬರ್ಗ ವಿಶ್ವ ವಿದ್ಯಾಲಯದ ಕುಲಪತಿ ಈ.ಟಿ. ಪುಟ್ಟಯ್ಯ ಬಿಡುಗಡೆ ಮಾಡುವರು.  ಅ.18ರಂದು ಬಿಜೆಪಿಯ ರಾಷ್ಟ್ರೀಯ ನಾಯಕ ವೆಂಕಯ್ಯ ನಾಯ್ಡು ಆಗಮಿಸಲಿದ್ದಾರೆ, `ವಚನಗಳಲ್ಲಿ ಪಂಚಾಚಾರ್ಯರು~ ಎಂಬ ಗ್ರಂಥವನ್ನು ದಾವಣಗೆರೆ ವಿಶ್ವ ವಿದ್ಯಾಲಯದ ಕುಲಪತಿ ಇಂದುಮತಿ ಬಿಡುಗಡೆ ಮಾಡುವರು.`ನಿರ್ಮಲ ನುಡಿ~ ಎಂಬ ಮಾಸ ಪತ್ರಿಕೆಯನ್ನು ಸಂಸದೆ ತೇಜಸ್ವಿನಿ ರಮೇಶ ಬಿಡುಗಡೆ ಮಾಡುವರು.  `ಧರ್ಮಾಚರಣೆಯಲ್ಲಿ ಮಹಿಳೆಯರ ಪಾತ್ರ~ ಎಂಬ ವಿಷಯದ ಬಗ್ಗೆ ತುಮಕೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಮೀನಾಕ್ಷಿ ಖಂಡಿಮಠ ಉಪನ್ಯಾಸ ನೀಡುವರು.ಅ.19ರಂದು `ಪಂಚಾಚಾರ್ಯ ಪ್ರಭಾ~ವನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಬಿಡುಗಡೆ ಮಾಡುವರು. `ವೇದಾಗಮಗಳಲ್ಲಿ ವಚನ ಸಾಹಿತ್ಯ~ ಎಂಬ ಕೃತಿಯನ್ನು ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಬಿ.ವಿ. ಪಾಟೀಲ್ ಬಿಡುಗಡೆ   ಮಾಡುವರು.  `ವೀರಶೈವ ಧರ್ಮದಲ್ಲಿ ಪಂಚಯಜ್ಞಗಳು~ ಎಂಬ ವಿಷಯದ ಬಗ್ಗೆ ಮೈಸೂರಿನ ಅರಮನೆ ಜಪದಕಟ್ಟೆಯ ಡಾ. ಮುಮ್ಮಡಿ ಚಂದ್ರಶೇಖರ  ಶಿವಾಚಾರ್ಯರು ಉಪನ್ಯಾಸ ನೀಡಲಿದ್ದಾರೆ. ಸಚಿವ ರೇವೂ ಬೆಳಮಗಿ ನಾಯಕ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ.ಅ.20ಕ್ಕೆ ಚಿಕ್ಕಮಗಳೂರು ಜಿಲ್ಲೆ ಭಾಸಾಪುರದ ಬಿ.ಎಂ. ಭೋಜೆಗೌಡರಿಗೆ `ರಂಭಾಪುರಿ ಯುವಶ್ರೀ~                ಮತ್ತು ಅ. 21ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಕಳಕಪ್ಪ ಜಿ. ಬಂಡಿ ಅವರಿಗೆ `ವೀರಶೈವ ಸಿರಿ~ ಎಂಬ ಪ್ರಶಸ್ತಿ ಪ್ರಧಾನ  ಮಾಡಲಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry