ಭಾನುವಾರ, ಮೇ 16, 2021
28 °C

ಇಂದಿನಿಂದ ರಾಷ್ಟ್ರೀಯ ಚೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಸ್ಕೂಲ್ ಆಫ್ ಚೆಸ್ (ಕೆಎಸ್‌ಸಿ) ಆಶ್ರಯದಲ್ಲಿ ಏಪ್ರಿಲ್ 4ರಿಂದ ನಾಲ್ಕು ದಿನಗಳ ಕಾಲ `ನಂದಿ ಟೊಯೊಟ ಕೆಎಸ್‌ಸಿ ಕಪ್~ ಅಖಿಲ ಭಾರತ ಓಪನ್ ಫಿಡೆ ರೇಟೆಡ್ ರಾಷ್ಟ್ರೀಯ ಚೆಸ್ ಟೂರ್ನಿ ಉದ್ಯಾನನಗರಿಯಲ್ಲಿ ನಡೆಯಲಿದೆ.ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಯುವ ಕೇಂದ್ರದಲ್ಲಿ ಈ ಟೂರ್ನಿ ಆಯೋಜಿಸಲಾಗಿದೆ. ಒಟ್ಟು ಹತ್ತು ಸುತ್ತಿನ ಪಂದ್ಯಗಳಿದ್ದು, ಪ್ರತಿದಿನ ಎರಡು ಸುತ್ತು ಜರುಗಲಿವೆ. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಹಾಗೂ 3ರಿಂದ ರಾತ್ರಿ 7ರ ವರೆಗೆ ಪಂದ್ಯಗಳು ನಡೆಯಲಿವೆ.ಈ ಟೂರ್ನಿ ಎರಡು ಲಕ್ಷ ರೂಪಾಯಿ ಬಹುಮಾನ ಹಾಗೂ 23 ಟ್ರೋಫಿಗಳನ್ನು ಒಳಗೊಂಡಿದ್ದು, 7, 9, 11, 13 ಹಾಗೂ 15 ವರ್ಷದೊಳಗಿನ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.ಪ್ರಶಸ್ತಿ ಜಯಿಸುವ ಸ್ಪರ್ಧಿ 25,000 ಹಾಗೂ `ನಂದಿ ಟೊಯೊಟ ಟ್ರೋಫಿ~ ತಮ್ಮದಾಗಿಸಿಕೊಳ್ಳಲಿದ್ದಾರೆ.ಉಚಿತ ಪ್ರವೇಶವಿದ್ದು, 400ಕ್ಕೂ ಅಧಿಕ ಸ್ಪರ್ಧಿಗಳು ಪೈಪೋಟಿ ನಡೆಸಲಿದ್ದಾರೆ. ತಮಿಳುನಾಡು, ಆತಿಥೇಯ ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗೋವಾ ಹಾಗೂ ಹಿಮಾಚಲ ಪ್ರದೇಶ ಸೇರಿದಂತೆ ಇತರ ರಾಜ್ಯಗಳ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.ಅಂತರರಾಷ್ಟ್ರೀಯ ಮಾಸ್ಟರ್ ಬಿ.ಎಸ್. ಶಿವಾನಂದ, ಡಿ.ಪಿ. ಸಿಂಗ್ (ಜಾರ್ಖಂಡ್), 17 ವರ್ಷದೊಳಗಿನವರ ವಿಭಾಗದ ಚಾಂಪಿಯನ್ ವಿನೋದ್ ಕುಮಾರ್, ಕರ್ನಾಟಕದ ಅರವಿಂದ್ ಶಾಸ್ತ್ರಿ, ಆರು ಸಲ ರಾಜ್ಯ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಎನ್. ಸಂಜಯ್, ಎಂ. ಸಾತ್ವಿಕ್, ಶ್ರೀರಾಮ್ ಆತಿಥೇಯ ರಾಜ್ಯದ ಸವಾಲನ್ನು ಮುನ್ನಡೆಸಲಿದ್ದಾರೆ.ಆರು ವರ್ಷಗಳ ಹಿಂದೆ ನಗರದಲ್ಲಿ ರಾಷ್ಟ್ರೀಯ ಚೆಸ್ ಟೂರ್ನಿ ನಡೆದಿತ್ತು. ನಂತರ ಈಗ ಈ ಅವಕಾಶ ಲಭಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.