ಇಂದಿನಿಂದ ಲಯನ್ಸ್ ಸಮ್ಮೇಳನ

7

ಇಂದಿನಿಂದ ಲಯನ್ಸ್ ಸಮ್ಮೇಳನ

Published:
Updated:

ಬೆಂಗಳೂರು:  ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ವತಿಯಿಂದ `ಭಾರತ, ದಕ್ಷಿಣ ಏಷ್ಯಾ, ಆಫ್ರಿಕಾ ಹಾಗೂ ಮಧ್ಯ ಏಷ್ಯಾದ 40ನೇ ಸಮ್ಮೇಳನ' ಇದೇ 6ರಿಂದ 9ರ ವರೆಗೆ ನಗರದಲ್ಲಿ ನಡೆಯಲಿದೆ.ಸಮ್ಮೇಳನ ಸಂಘಟನಾ ಸಮಿತಿಯ ಅಧ್ಯಕ್ಷ ವಿ.ವಿ.ಕೃಷ್ಣ ರೆಡ್ಡಿ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಅರಮನೆಯಲ್ಲಿ ಗುರುವಾರ ಸಂಜೆ 5.30ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು, 32 ರಾಷ್ಟ್ರಗಳ 2,000ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವರು. ಲಯನ್ಸ್ ಕ್ಲಬ್‌ನ ವಿವಿಧ ಕಾರ್ಯಕ್ರಮಗಳು ಹಾಗೂ ಭಾರತದಲ್ಲಿ ವಿವಿಧ ಸೇವಾ ಯೋಜನೆಗಳಿಗೆ ಹಣಕಾಸು ನೆರವು ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು' ಎಂದರು.`ಲಯನ್ಸ್ ಕ್ಲಬ್ ನಗರದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಲ್ಲಿಗೆ ಮೂಲಸೌಕರ್ಯ ಒದಗಿಸಲಿದೆ. ಕ್ಲಬ್ ವತಿಯಿಂದ ನಗರದಲ್ಲಿ ಈವರೆಗೆ 50 ಉಚಿತ ಹೃದ್ರೋಗ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಈ ತಿಂಗಳಿನಲ್ಲಿ ಮೂರು ಕೇಂದ್ರಗಳನ್ನು ಆರಂಭಿಸಲಾಗುವುದು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry