ಭಾನುವಾರ, ಜನವರಿ 26, 2020
27 °C

ಇಂದಿನಿಂದ ವಾರ್ಷಿಕ ಸಂಭ್ರಮ

ಪ್ರಜಾವಾಣಿ ವಾರ್ತೆ, Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ಪ್ರತಿಷ್ಠಿತ ಸಿದ್ಧಗಂಗಾ ವಿದ್ಯಾಸಂಸ್ಥೆಯ 42ನೇ ವಾರ್ಷಿಕೋತ್ಸವ ಜ. 27ರಿಂದ 28ರವರೆಗೆ ಶಾಲೆ ಆವರಣದಲ್ಲಿ ನಡೆಯಲಿದೆ ಎಂದು ಸಿದ್ದಗಂಗಾ ಕಾಂಪೋಜಿಟ್ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಜಸ್ಟಿನ್ ಡಿಸೋಜಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಉನ್ನತಶ್ರೇಣಿ ಪಡೆದ 49 ವಿದ್ಯಾರ್ಥಿಗಳನ್ನು ಮತ್ತು ಪಿಯುನಲ್ಲಿ ಉನ್ನತ್ರ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುವ 9 ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಜ್ಞಾನದ ಜ್ಞಾಪಕಕ್ಕಾಗಿ ಕಲಾವಿದ ನಾ. ರೇವನ್ ತಯಾರಿಸಿರುವ ಸ್ಮರಣಿಕೆಯನ್ನು ನೀಡಲಾಗುತ್ತಿದೆ. ಪುಸ್ತಕದ ಮೇಲೆ ವಿಶ್ವ, ವಿಶ್ವವನ್ನು ಜಯಿಸಿದ ಮಾನವ, ಮಾನವಾಕೃತಿ ಕೈಯಲ್ಲಿ ಲೇಖನಿ ಇರುವ ಕೃತಿಯನ್ನು ಸ್ಮರಣಿಕೆ ಒಳಗೊಂಡಿದೆ. ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ಸಾಧನೆ ಮಾಡಿದ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದ ಮಕ್ಕಳಿಗೆ ಸನ್ಮಾನಿಸಲಾಗುವುದು. ರಾತ್ರಿ ಲೇಸರ್ ಷೋ ನಡೆಯಲಿದೆ ಎಂದು ವಿವರಿಸಿದರು.

 

ಜ. 28ರಂದು ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಎಸ್. ಶಿವಣ್ಣ, ಸಿದ್ದಗಂಗಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಎಸ್. ಬಂಗೇರ, ಸಂಸ್ಥೆಯ ನಿರ್ದೇಶಕ ಹೇಮಂತ್, ಎಂ.ಎನ್. ಶೀತಲ್ ಹಾಜರಿದ್ದರು.

ಮನವಿ

ಹತ್ತಿಯ ಮೇಲಿನ ಶೇ 5ರಷ್ಟು ತೆರಿಗೆಯನ್ನು ಸರ್ಕಾರ ಶೇ 2ಕ್ಕೆ ಇಳಿಸಿದೆ. ಇದು ಎಣ್ಣೆ ಕಾಳುಗಳಿಗೂ ಅನ್ವಯವಾಗಬೇಕೆಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಈಚೆಗೆ ಮನವಿ ಸಲ್ಲಿಸಿದೆ ಎಂದು ಪ್ರಕಟಣೆ ತಿಳಿಸಿದೆ.

 

ಪ್ರತಿಕ್ರಿಯಿಸಿ (+)