ಗುರುವಾರ , ನವೆಂಬರ್ 21, 2019
26 °C

ಇಂದಿನಿಂದ `ವೀವ್ಸ್' ಪ್ರದರ್ಶನ ಆರಂಭ

Published:
Updated:

ಭಾರತದ ಖ್ಯಾತ ಹತ್ತಿ ಮತ್ತು ರೇಷ್ಮೆ ನೇಕಾರರೆಲ್ಲ ಒಂದಾಗಿ `ವೀವ್ಸ್' ಪ್ರದರ್ಶನ ನಡೆಸುವುದು ಸಾಮಾನ್ಯ. ಈಗ ಮತ್ತೆ ನೇಕಾರರೆಲ್ಲ ತಮ್ಮ ನೂತನ ವಿನ್ಯಾಸದ ಸೀರೆಗಳ ಸಂಗ್ರಹಗಳೊಂದಿಗೆ ನಗರಕ್ಕೆ ಬಂದಿದ್ದಾರೆ.ಕೆ.ಆರ್.ಪುರಂನ ಶುಭಮೇರು ಕಲ್ಯಾಣಮಂಟಪದಲ್ಲಿ ಏ.6ರಿಂದ 9ರವರೆಗೆ ಹತ್ತಿ ಮತ್ತು ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಆಯೋಜಿಸಲಾಗಿದೆ. ಆಂಧ್ರಪ್ರದೇಶ, ಬಿಹಾರ್, ಛತ್ತೀಸ್‌ಗಡ್, ಗುಜರಾತ್, ಜಮ್ಮು ಕಾಶ್ಮೀರ, ರಾಜಸ್ತಾನ, ಮದ್ಯಪ್ರದೇಶ, ಒರಿಸ್ಸಾ, ಕರ್ನಾಟಕ, ಪಶ್ಚಿಮಬಂಗಾಳ, ಉತ್ತರಪ್ರದೇಶ ಮತ್ತು ತಮಿಳುನಾಡಿನ ನೇಕಾರರು ತಯಾರಿಸಿದ ವಿಶಿಷ್ಟ ಸೀರೆಗಳು ಮತ್ತು ಡ್ರೆಸ್ ಮಟೀರಿಯಲ್‌ಗಳು ಪ್ರದರ್ಶನದಲ್ಲಿವೆ. ಪ್ರದರ್ಶನ ಬೆಳಗ್ಗೆ 11ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ.ವಿಳಾಸ: ಶುಭಮೇರು ಕಲ್ಯಾಣಮಂಟಪ, ಕೆ.ಆರ್.ಪುರಂ, ಮಾರತ್‌ಹಳ್ಳಿ ರಿಂಗ್ ರಸ್ತೆ,ಮಹದೇವಪುರ. ಮಾಹಿತಿಗಾಗಿ: 09010878670

 

ಪ್ರತಿಕ್ರಿಯಿಸಿ (+)