ಬುಧವಾರ, ಏಪ್ರಿಲ್ 14, 2021
24 °C

ಇಂದಿನಿಂದ ಷಣ್ಮುಗಂ ಕಪ್ ಫುಟ್‌ಬಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿರಿಯ ಫುಟ್‌ಬಾಲ್ ಆಟಗಾರ ಹಾಗೂ ಒಲಿಂಪಿಯನ್ `ಟಿ. ಷಣ್ಮುಗಂ ಕಪ್ 2012ರ~ ಆಹ್ವಾನಿತ ಅಂತರ ಶಿಬಿರ ಮಟ್ಟದ ಇಂದಿರಾಗಾಂಧಿ ಸ್ಮಾರಕ ಫುಟ್‌ಬಾಲ್ ಟೂರ್ನಿ ಜುಲೈ 15ರಿಂದ ನಡೆಯಲಿದೆ.ಮರ್ಫಿ ಟೌನ್‌ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪಂದ್ಯಗಳು ನಡೆಯಲಿದ್ದು, ಆಸ್ಟಿನ್ ಟೌನ್, ಶ್ರೀರಾಮಪುರ, ಗೌತಮಪುರ ಸೇರಿದಂತೆ ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಈ ಟೂರ್ನಿ ಎರಡನೇ ವರ್ಷ ನಡೆಯುತ್ತಿದ್ದು, ಜುಲೈ 22ರಂದು ಫೈನಲ್ ಪಂದ್ಯ ಜರುಗಲಿದೆ. 50,000 (ಪ್ರಥಮ ಸ್ಥಾನ), 25,000 (ದ್ವಿತೀಯ) ಹಾಗೂ ಅತ್ಯುತ್ತಮ ಆಟಗಾರ (5000 ನಗದು ಹಾಗೂ ಪ್ರಶಸ್ತಿ ಪತ್ರ) ಬಹುಮಾನ ನಿಗದಿ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.