ಇಂದಿನಿಂದ ಸಿಕೋಪ ಮೇಳ

7

ಇಂದಿನಿಂದ ಸಿಕೋಪ ಮೇಳ

Published:
Updated:

ಸಿಕೋಪ (ಸೆಂಟರ್ ಫಾರ್ ಇಂಡಸ್ಟ್ರಿಯಲ್ ಕೊ ಆಪರೇಟಿವ್ಸ್ ಆಫ್ ಪ್ರೊಡ್ಯೂಸರ್ಸ್‌ ಅಂಡ್ ಆರ್ಟಿಸನ್ಸ್ ) ಸಂಸ್ಥೆ ಶುಕ್ರವಾರ (ಫೆ.10ರಿಂದ 12)ದಿಂದ ಭಾನುವಾರದವರೆಗೆ `ಸಿಕೋಪ~ ಮೇಳವನ್ನು ಆಯೋಜಿಸಿದೆ.ಪ್ರತಿ ವರ್ಷದಂತೆ ಈ ಬಾರಿಯೂ ಮೇಳವನ್ನು ಹಮ್ಮಿಕೊಂಡಿದ್ದು, ಮಹಿಳಾ ಸಂಘ ಸಂಸ್ಥೆಗಳ ಸದಸ್ಯರು ತಯಾರಿಸಿದ ಉತ್ಪನ್ನಗಳು ಮಾರಾಟವಾಗಲಿವೆ. 45 ಮಳಿಗೆಗಳಲ್ಲಿ ಕರಕುಶಲ ಮತ್ತು ಕಲಾತ್ಮಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವಿದೆ.ಎಮ್ರಾಯ್ಡರಿ ಸೀರೆಗಳು, ಗೃಹಲಂಕಾರಿಕ ವಸ್ತುಗಳು ಗಮನ ಸೆಳೆಯಲಿವೆ. ಜೊತೆಗೆ ನಿತ್ಯ ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

ಗೃಹ ಸಚಿವ ಆರ್.ಅಶೋಕ ಮೇಳವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ವಿಮಲಾಗೌಡ, ಸರೋಜಿನಿ ಭಾರದ್ವಾಜ್, ಪ್ರಿಯಾಂಕ ಉಪೇಂದ್ರ, ಸಿ.ಮಂಜುಳಾ ಭಾಗವಹಿಸಲಿದ್ದಾರೆ.

ಸ್ಥಳ: ಆರ್.ಐ.ಸಿ.ಎಂ. ಕ್ಯಾಂಪಸ್, ಪದ್ಮನಾಭನಗರ. ಬೆಳಿಗ್ಗೆ11. ಮಾಹಿತಿಗೆ 2669 0119

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry