ಬುಧವಾರ, ನವೆಂಬರ್ 20, 2019
25 °C

ಇಂದಿನಿಂದ `ಸ್ವಯಂ' ತಾಂತ್ರಿಕ ಹಬ್ಬ

Published:
Updated:

ಎಂ.ವಿ.ಜೆ. ಎಂಜಿನಿಯರಿಂಗ್ ಕಾಲೇಜು ನಡೆಸುವ ವಾರ್ಷಿಕ ತಾಂತ್ರಿಕ-ಸಾಂಸ್ಕೃತಿಕ ಹಬ್ಬ `ಸ್ವಯಂ-2013' ಇದೇ 25ರಿಂದ 27ರವರೆಗೆ ನಡೆಯಲಿದೆ.ನಗರದ 100ಕ್ಕೂ ಅಧಿಕ ಕಾಲೇಜುಗಳು ಈ ಅಂತರಕಾಲೇಜು ತಾಂತ್ರಿಕ-ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಲಿವೆ. ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಈ ಹಬ್ಬ ಸಾಕ್ಷಿಯಾಗಲಿದೆ.`ಸ್ವಯಂ-2013' ಹಬ್ಬವನ್ನು ನಟ ಅವಿನಾಶ್ ಗುರುವಾರ ಬೆಳಿಗ್ಗೆ ಉದ್ಘಾಟಿಸಲಿದ್ದಾರೆ. ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ `ದ್ವೀಪ' ಪ್ರದರ್ಶನಗೊಳ್ಳಲಿದೆ.ಕಾರ್ಯಕ್ರಮದ ಎರಡು ಹಾಗೂ ಮೂರನೇ ದಿನ ರೋಮಾಂಚಕಾರಿ ಅನುಭವ ನೀಡುವ ಸ್ಪರ್ಧೆಗಳು ನಡೆಯಲಿವೆ. ವೆರ್‌ಟೆಕ್ಸ್ 4.0 ತಾಂತ್ರಿಕ ಹಬ್ಬ, ತಂತ್ರಜ್ಞಾನ ಕ್ಷೇತ್ರದಲ್ಲಿರುವ ವಿದ್ಯಾರ್ಥಿಗಳು ಹಾಗೂ ವಿದ್ಯುನ್ಮಾನ ಉಪಕರಣಗಳಲ್ಲಿ ಆಸಕ್ತಿ ಇರುವವರೆಲ್ಲರಿಗೂ ಇದು ಉಪಯುಕ್ತ. ಕ್ರೇಜಿ ಕಂಪ್ಯೂಟಿಂಗ್, ಗ್ಲೈಡೊ ವಾರ್ಸ್‌ ಹಾಗೂ ರೊಬೊವಾರ್‌ಗಳು ತಂತ್ರಜ್ಞಾನ ವಿದ್ಯಾರ್ಥಿಗಳ ಜ್ಞಾನವನ್ನು ಹಿಗ್ಗಿಸಲಿವೆ.ಇದರ ಜೊತೆಗೆ ನೃತ್ಯ, ಸಂಗೀತ, ಚಲನಚಿತ್ರಗಳು, ಆಹಾರ ಮೇಳಗಳು ನಡೆಯಲಿವೆ. ಮೈಸೂರಿನ `ಮೈಸೂರ್ ನಗಾರಿ' ಎಂಬ ಸಂಗೀತ ತಂಡ ಹಾಗೂ ನಗರದ ರಾಕ್ ಬ್ಯಾಂಡ್ ತಂಡ `ಲಗೋರಿ' ಸಂಗೀತ ಪ್ರಿಯರಿಗೆ ರಸದೌತಣ ಉಣಬಡಿಸಲಿದ್ದಾರೆ.

ಪ್ರತಿಕ್ರಿಯಿಸಿ (+)